1ಚಳ್ಳಕೆರೆ: ನಗರದಲ್ಲಿ ಎಲ್ಲ ಸೌಲಭ್ಯಗಳುಳ್ಳವರು,ಗೃಹಪಾಠ, ಮಾರ್ಗದರ್ಶನ ಲಭ್ಯವಿರುವವರು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾಗುವುದು ದೊಡ್ಡ ಸಂಗತಿಯಲ್ಲ, ಆದರೆ ವಿದ್ಯಾರ್ಥಿಗಳಿಗೆ ಮಾದರಿಯಾಗುವ ರೀತಿಯಲ್ಲಿ ಗಡಿ ಭಾಗದ ಹಳ್ಳಿಯ ಬಡ ವಿದ್ಯಾರ್ಥಿಯೊಬ್ಬ ಡಿಪ್ಲಮೋ ಇಂಜಿನಿಯರಿಂಗ್ ಸಿವಿಲ್ ವಿಷಯದಲ್ಲಿ ಟಾಪರ್ ಆಗಿ ಪಾಸಾಗುವು ಮೂಲಕ ಕಾಲೇಜಿಗೆ, ಪೋಷಕರಿಗೆ ಹಣ ಹಣ ಸಹಾಯ ಮಾಡಿದ ಸ್ನೇಹಿತರಿಗೆ ಕೀರ್ತಿ ತಂದಿದ್ದಾನೆ.
ಚಳ್ಳಕೆರೆ ತಾಲೂಕಿನ ರೇಣುಕಾಪುರದ ಯಾದವ ಸಮಾಜದ ದಿವಾಂಗತ ಈಶ್ವರಪ್ಪ ತಾಯಿ ಗೀತಾ ಇವರ ಪುತ್ರ ಪ್ರಮೋದ್‌ಯಾದವ್ ಡಿ.ಆರ್.ಆರ್.ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತೃತಿಯ ಸಿವಿಲ್ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು ೨೦೧೫ ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ೮೭೫ ಅಂಕಗಳಿಗೆ ೭೭೨ ಅಂಕಗಳನ್ನು ಪಡೆದು  ಶೇ ೮೮ ಪಡೆಯುವ ಮೂಲಕ ಟಾಪರ್ ಆಗಿ ಉತ್ತೀರ್ಣಗೊಂಡಿದ್ದಾನೆ.
ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದು ಕೊಂಡ ಪ್ರಮೋದ್‌ಯಾದವ್ ತಾಯಿ ಗೀತಾ ಟೈಲರಿಂಗ್ ವೃತ್ತಿಯಲ್ಲಿ ದುಡಿದ ಅಲ್ಪ ಸ್ವಲ್ಪ ಹಣವನ್ನು ಮಗನ ವ್ಯಾಸಂಗಕ್ಕಾಗಿ ಕಳಿಸುತ್ತಿದ್ದಳು. ನಿವೃತ್ತ ಶಿಕ್ಷಣ ಸಂಯೋಜಕ ಕರಿಯಪ್ಪ ಹಾಗೂ ಸ್ನೇಹಿತರು ಪ್ರಮೋದ್ ಯಾದವ್ ಬ್ಯಾಂಕ್ ಖಾತೆಗೆ ಹಣ ಕಳಿಸುತ್ತಿದ್ದರು ಇವರೆಲ್ಲಾ ಕಳಿದ ಹಣವನ್ನು ದುಂದ ವೆಚ್ಚ ಮಾಡದೆ ಯಾವುದೇ ಟ್ಯೂಷನ್ ಹೋಗದೆ ಬಿಸಿಎಂ ವಸತಿನಿಲಯದಲ್ಲಿದ್ದು ಕೊಂಡು ವ್ಯಾಸಂಗ ಮಾಡಿ ಶೇ ೮೮  ಟಾಪರ್‌ನಲ್ಲಿ ತೇರ್ಗಡೆಯಾಗಿರುವುದರಿಂದ ಡಿಆರ್‌ಆರ್ ಎಂ ಪಾಲಿಟೆಕ್ನಿಕ್ ಆಡಳಿತ ಮಂಡಳಿ, ಶಿಕ್ಷಕವರ್ಗ ಹಾಗೂ ಸ್ನೇಹಿತರು ವಿದ್ಯಾರ್ಥಿಗೆ ಅಭಿನಂದನೆ ಸಲ್ಲಿಸಿದ್ದಾರೆ.