ದಾವಣಗೆರೆ ; ದಾವಣಗೆರೆ ಶಿವಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ದಾವಣಗೆರೆ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಭಾವೈಕತೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವ ವಿದ್ಯಾನಿಲಯದ ಪ್ರಬಾರ ಕುಲಪತಿ ಬಿ ಪಿ ವೀರಭದ್ರಪ್ಪ ಇಂತ ಶಿಬಿರಗಳು ಕೇವಲ ಯಾವುದೇ ಒಂದು ಸೀಮಿತ ಸಮುದಾಯ ಅಥವಾ ಧರ್ಮಗಳಿಗೆ ಸೀಮಿತವಾಗಿಲ್ಲ ಎಲ್ಲಾ ಸಮುದಾಯಗಳಿಗು ಅಗತ್ಯವಾಗಿದೆ. ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಏಕೈಕ ರಾಷ್ಟ್ರವಾಗಿದೆ. ಇಂತ ಶಿಬಿರಗಳು ವಿದ್ಯಾರ್ಥಿಗಳಿ ಸಾಮಾಜಿಕ ಮೌಲ್ಯಗಳನ್ನು ತಿಳಿಸಿ ಬೆಳಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಸೂಚಿಸಿದರು.

ಶಿಕ್ಷಣ, ಸಮಾನತೆ, ಸ್ವಾತ್ರಂತ್ರ್ಯದ ಪ್ರವೃತ್ತಿಗಳನ್ನು ತಿಳಿಸುತ್ತವೆ. ಅಲ್ಲದೇ ಸಮಾಜಕ್ಕೆ ಧನಾತ್ಮಕ ಅಂಶಗಳನ್ನು ನೀಡಿ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಬೆಳಸುತ್ತವೆ ಎಂದರು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಎನ್ ಎಸ್ ಎಸ್ ನಿರ್ದೇಶಕರು ಭಾರತ ಸರ್ಕಾರ. ಶ್ರೀ ಡಿ. ಕಾರ್ತಿಗೇಯನ್ ಮಾತನಾಡಿ ಭಾರತ ದೇಶವು ವಿವಿಧ ವಿಚಾರಗಳಲ್ಲಿ ಇತರೆ ದೇಶಗಳಿಗೆ ಮಾದರಿಯಾಗಿದೆ ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಕಲಿತು ಬೇರೆಯವರಿಗೆ ಕಲಿಸುವುದು ಮುಖ್ಯ ಉದ್ದೇಶವಾಗಿದೆ. ಇಂತಹ ಶಿಬಿರಗಳಿಗೆ ಭಾಗವಹಿಸಿದ ನಂತರ ಹಲವಾರು ಅವಕಾಶಗಳು ವಿದ್ಯಾರ್ಥಿಗಳಿಗೆ ದೊರಕುತ್ತವೆ. ಇಲ್ಲಿ ಯಾವುದೇ ರೀತಿಯಾಗಿ ರಾಜಕೀಯದ ಹಸ್ತಕ್ಷೇಪವಿರುವುದಿಲ್ಲ. ಕೇವಲ ಸಾಮಾಜಿಕ ಕಳಕಳಿಯು ಅಡಗಿರುತ್ತದೆ. ಇದು ಕೇವಲ ಶಾಲಾ ಕಾಲೇಜು ವಿಶ್ವವಿದ್ಯಾನಿಲಯಗಳಿಗೆ ಮಾತ್ರ ಸೀಮಿತವಾಗಿರೆದೆ ಹಲವಾರು ಪ್ರಕೃತಿ ವಿಕೋಪಗಳ ಸಂದಂರ್ಭದಲ್ಲಿ ಭಾಗವಹಿಸುವುದರ ಮುಖಾಂತರ ಸಹಾಯವನ್ನು ಮಾಡಿತ್ತಿದೆ. ಇಲ್ಲಿ ನಿಮಗೆ ಹಲವಾರು ಅನುಭವ, ಹೊಸ ಹೊಸ ವಿಚಾರಗಳು ದೊರಕುತ್ತವೆ ಅವಗಳನ್ನು ಸರಿಯಾಗಿ ತಿಳಿದುಕೊಂಡು ಮತ್ತೋಬ್ಬರಿಗೂ ತಿಳಿಯುವಂತೆ ಮಾಡುವ ಕರ್ತವ್ಯ ತಮ್ಮದಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ದಾವಣಗೆರೆ ವಿವಿಯ ಪರೀಕ್ಷಾಂಗ ಸಚಿವರಾದ ಪ್ರೋ. ಗಂಗಾಧರ್‌ನಾಯ್ಕ್ ಮಾತನಾಡಿ ಇಂತಹ ಶಿಬಿರಗಳು ಸಾಮಾಜಿಕ ಸೇವೆಯನ್ನು ತಮ್ಮಲ್ಲಿ ಮೈಗೂಡಿಸುತ್ತವೆ ಆದರಿಂದ ಸ್ವಾರ್ಥ ಮನೋಭಾವನೆಯು ನಿಮ್ಮಲ್ಲಿ ದೂರವಾಗಿ ಸಾಮಾಜಿಕ ಹಿತದೃಷ್ಠಿಯ ಮತ್ತು ಮಾನವಿಯತೆಯಿಂದ ಇಂತಹ ಶಿಬಿರಗಳು ಅಗತ್ಯವಾಗಿದೆ. ಇವು ಕೇವಲ ಸಾಮಾಜಿಕ ಕಳಕಳಿ ಮಾತ್ರವಲ್ಲದೇ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ, ಮೌಢ್ಯತೆ, ಆರೋಗ್ಯ, ಮಕ್ಕಳ ಶಿಕ್ಷಣ ಮತ್ತು ಸಂಸ್ಕ್ರತಿಯನ್ನು ತಮಗೆ ತಿಳಿಸುತ್ತವೆ ವಿವಿಧ ವಿಚಾರಗಳ ಬಗ್ಗೆ ಅರಿವು ನೀಡಿ ಅಪಾರವಾದ ಜ್ಞಾನವನ್ನು ನೀಡುತ್ತವೆ ಸರಿಯಾದ ರೀತಿಯಲ್ಲಿ ಇಂತಹ ಶಿಬಿರಗಳನ್ನು ಸದುಪುಯೋಗ ಪಡಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ ಎಂದು ಎನ್‌ಎಸ್‌ಎಸ್ ಶಿಬಿರಕ್ಕೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಪ್ರೋ. ಬಿ, ಮಧುಸೂದನ್, ಬಿ.ಎಸ್. ಪ್ರದೀಪ್ ಸಹಾಯಕ ಪ್ರಾಧ್ಯಪಕರು ಮತ್ತು ಕಾರ್ಯಕ್ರಮದ ಸಂಯೋಜನ ಅಧಿಕಾರಿ. ದಾವಿವಿಯ ದೈಹಿಕ ಶಿಕ್ಷಣ ನಿದೇಶಕರಾದ ರಾಜ್‌ಕುಮಾರ್, ಪತ್ರಿಕೊದ್ಯಮ ವಿಭಾಗದ ಬಸಯ್ಯ ಹೊಸುರ್‌ಮಠ್, ವಿನಯ್ ಎಮ್, ಭೋದಕ ಮತ್ತು ಭೋದಕೇತ್ತರ ಸಿಬ್ಬಂದ್ದಿ ವರ್ಗ ಹಾಗೂ ವಿವಿಧ ರಾಜ್ಯದ ಶಿಬಿರ ವಿದ್ಯಾರ್ಥಿಗಳು, ದಾವಣಗೆರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.