ಸಾಣೇಹಳ್ಳಿ: ಇಲ್ಲಿನ ಶಿವಕುಮಾರ ರಂಗಮಂದಿರದಲ್ಲಿ ಶ್ರೀ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಹತ್ತನೆಯ ತರಗತಿಯ ಸಿದ್ಧನಗೌಡ ಅಧ್ಯಕ್ಷತೆ ವಹಿಸಿದ್ದರು. ಏಳೆನೆಯ ತರಗತಿಯ ಡಿ ಎಸ್ ಶಿವಸ್ವರೂಪ್ ಎಂಟನೆಯ ತರಗತಿಯ ಆರ್ ದಿನೇಶ್ ಮಕ್ಕಳ ದಿನಾಚರಣೆ ಕುರಿತಂತೆ ಮಾತನಾಡಿದರು. ಬಿಂದು, ದೀಪಾ, ಚರಣ್ ಮತ್ತು ರಾಕೇಶ್ ವೇದಿಕೆಯಮೇಲೆ ಉಪಸ್ಥಿತರಿದ್ದರು.

ಚೈತ್ರಶ್ರೀ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿನಿಯರು ನೆಹರುಗೀತೆ ಹಾಡಿದರು. ಶ್ರೀ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಮಕ್ಕಳು, ಮುಖ್ಯೋಪಾಧ್ಯಾರು, ಅಧ್ಯಾಪಕರು ಮತ್ತು ನೌಕರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.