ಬೆಂಗಳೂರು: ಸರ್ಕಾರಿ ನೌಕರರ ಪೂರ್ಣ ಪ್ರಮಾಣದ ನಿವೃತ್ತಿ ವೇತನ ಅರ್ಹತಾ ಅವಧಿ ಇಳಿಕೆಗೆ ಆರನೇ ವೇತನ ಆಯೋಗ ಮಾಡಿದ್ದ ಶಿಫಾರಸು ಮಂಜೂರಾಗಿದ್ದು, ಇನ್ನು ಮುಂದೆ 30 ವರ್ಷ ಕಾರ್ಯ ನಿರ್ವಹಿಸಿದ ನೌಕರರು ಪೂರ್ಣ ಪ್ರಮಾಣದ ನಿವೃತ್ತಿ ಸೌಲಭ್ಯ ಪಡೆಯಲಿದ್ದಾರೆ.

ಅರ್ಹತಾ ಅವಧಿಯನ್ನು 33ರಿಂದ 30 ವರ್ಷಕ್ಕೆ ಇಳಿಸಲಾಗಿದ್ದು, ಜ.1ರಿಂದಲೇ ಈ ನಿಯಮ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ಎಲ್ಲ ನೌಕರರಿಗೆ ನೀಡಲಾಗುವ ಬಡ್ಡಿರಹಿತ ಹಬ್ಬದ ಮುಂಗಡ ಮೊತ್ತವನ್ನು 10 ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.