ಭಾರತದೇಶವು ಮಹಾನ್ ಮನವತಾವಾದಿಗಳು, ಚಿಂತಕರು, ಮೇಧಾವಿಗಳು, ದಾರ್ಶನಿಕರನ್ನು ಒಳಗೊಂಡ ನಾಡು. ಬುದ್ಧ, ಬಸವ, ಮಹಾವೀರ, ಅಂಬೇಡ್ಕರ್, ಗಾಂಧೀ,ಪರಮಹಂಸರು, ಸ್ವಾಮಿ ವಿವೇಕಾನಂದರು, ರಾಜಾರಾಮ್ ಮೋಹನರಾಯ್, ಮುಂತಾದ ಮಹಾನ್ ಚೇತನಗಳನ್ನು ಒಡಲಿನಲ್ಲಿರಿಸಿಕೊಂಡ ರಾಷ್ಟ್ರವಾಗಿದೆ. ಇವರಎಲ್ಲಾ ವಿಚಾರಧಾರೆಗಳಿಂದ, ನಮ್ಮದೇಶ ಸಾಕಷ್ಟು ಜ್ಞಾನ ಸಿರಿಯನ್ನು ಹೆಚ್ಚಿಸಿಕೊಂಡಿದೆ.ಆದಗ್ಯೂ ನಮ್ಮದೇಶ ಹಲವು ಸಾಮಾಜಿಕ ಸಮಸ್ಯೆಗಳಾದ ಅಸಮಾನತೆ, ಅಸ್ಪøಶ್ಯತೆ, ಲಿಂಗತರತಮ್ಯ, ಮುಂತಾದ ಸಮಸ್ಯೆಗಳ ತಾಣವಾಗಿ ಬೇರು ಬಿಟ್ಟಿದೆ. ನಮ್ಮದೇಶದಲ್ಲಿ ಹೆಚ್ಚಾಗಿ ನರಳುತ್ತಿರುವ ಸಂಕೀರ್ಣ ಮತ್ತುಜಟಿಲ ಸಮಸ್ಯೆಗಳೆಂದರೆ ‘ಧರ್ಮ ಮತ್ತುಜಾತೀಯತೆ’ ಈ ಸಮಸ್ಯೆಗಳು ಇಂದು ನಿನ್ನೆಯದಲ್ಲ ಶತ-ಶತಮಾನಗಳಿಂದ ನಮ್ಮ ಸಾಮ್ರಾಜ್ಯಕ್ಕೆಅಂಟಿಬಂದಿರುವ ಜಾಡ್ಯಗಳಾಗಿವೆ. ಸಾಮಾಜಿಕಅಸಮಾನತೆ, ಅಜ್ಞಾನ, ಅಂದಕಾರದಧಾರ್ಮಿಕತೆ ಈ ಎಲ್ಲಾ ವಿಷಯಗಳನ್ನು ಕುರಿತುಕನ್ನಡದ ಅನೇಕದಾರ್ಶನಿಕರು, ಕವಿಗಳು, ಸಂತರು, ತಮ್ಮ ವಿಚಾರಧಾರೆಗಳಿಂದ ಅವುಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಕುವೆಂಪು ಅವರು ಹೇಳುವಂತೆ “ಗುಡಿಚರ್ಚ್ ಮಸಜೀದಿಗಳ ಬಿಟ್ಟು ಹೊರಬನ್ನಿ, ಮೌಢ್ಯತೆಯ ಮಾರಿಯನು ಹೊರದುಡಲೈತನ್ನಿವಿಜ್ಞಾನ ದೀವಿಗೆಯ ಹಿಡಿಯ ಬನ್ನಿ” -ಎಂದು ಹೇಳುತ್ತಾ ನಮ್ಮಲ್ಲಿರುವಧಾರ್ಮಿಕತೆ ಹಾಗೂ ಜಾತಿಯ ಮೌಢ್ಯಗಳ ಅಂಧಕಾರವನ್ನು ದಿಕ್ಕರಿಸುತ್ತಾ ಅವುಗಳನ್ನು ವೈಚಾರಿಕತೆಯಒರೆಗೆ ಹಚ್ಚಿ ವಿಜ್ಞಾನದಬೆಳಕನ್ನು ಹರಿಸಬೇಕುಎಂದಿದ್ದಾರೆ. ನಾವು ನಮ್ಮಕನ್ನಡ ಸಾಹಿತ್ಯಇತುಹಾಸವನ್ನು ನೋಡಿದಾಗ ಈ ನಿಟ್ಟಿನಲ್ಲಿ ನಡೆದು ಬಂದು ಬಹು ದೊಡ್ಡಕ್ರಾಂತಿಎಂದರೆಅದು ವಚನ ಸಾಹಿತ್ಯ ಹನ್ನೆರಡನೆ ಶತಮಾನದಲ್ಲಿ ನಡೆದ ಶರಣರ ಸಮಾಜೋ-ಧಾರ್ಮಿಕಆಂದೋಲನ ಸಾಮಾಜಿಕ ಪ್ರಗತಿಗೆದಾರಿದೀಪವಾಗಿದೆ.ಶರಣರ ಅರಿವು-ಆಲೋಚನೆಗಳು ಸರಳ ವಚನ ರಚನೆಗಳಲ್ಲಿ ಹರಳುಗೊಂಡಿದೆ. ಅವು ಒಲಿದಂತೆ ಹಾಡಿದರ ಫಲವಾಗಿ ಮೂಡಿಬಂದಿವೆ. ಇವು ಸುಖದಸುಪ್ಪತ್ತಿಗೆಯಲ್ಲಿ ರೂಪಗೊಳ್ಳದೆ ಪ್ರಭುತ್ವದ ವಿರುದ್ಧದಕ್ರಾಂತಿಯಲ್ಲಿ ಮೈದಾಳಿವೆ. ಇದು ಪುರೋಹಿತಶಾಹಿ ಹಾಗೂ ಪ್ರಭುತ್ವದ ಕಬಂಧಬಾಹುಗಳಿಂದ ಬಿಡಿಸಿಕೊಳ್ಳಲು ಬಸವಣ್ಣನವರ ದಿವ್ಯ ನೇತೃತ್ವದಲ್ಲಿ ನಡೆದ ಚಳುವಳಿಯಾಗಿದೆ. ಬಸವಣ್ಣ, ಅಲ್ಲಮಪ್ರಭು, ದಾಸಿಮಯ್ಯ, ಅಕ್ಕಮಹಾದೇವಿ, ಸಿದ್ಧರಾಮ, ಚೆನ್ನಬಸವಣ್ಣ ಈ ಸಾಲಿನಲ್ಲಿ ಮುಂಚೂಣಿಯಾಗಿ ನಿಲ್ಲುತ್ತಾರೆ.ಅದರಲ್ಲಿಯೂ ಹನ್ನೆರಡನೆ ಶತಮಾನದಲ್ಲಿಒಬ್ಬ ಮಾಹಾನ್ ಸಾಮಾಜಿಕಕ್ರಾಂತಿಯ ಹರಿಕಾರನಾಗಿ, ಪ್ರಧಾನಿಯಾಗಿ, ರಾಜಕೀಯ ಶಕ್ತಿಯಾಗಿ, ಧವರ್iಗುರುವಾಗಿ, ಆಧ್ಯಾತ್ಮಿಕ ಶಕ್ತಿಯಾಗಿ ಬೆಳೆದು ಸಾಮಾಜಿಕಕ್ರಾಂತಿಗೆ ಮುನ್ನುಡಿಯಾದರು.ಜಾತಿವ್ಯವಸ್ಥೆಯನ್ನುಕಿತ್ತೊಗೆಯಲು ಬಹುವಾಗಿ ಪ್ರಯತ್ನಿಸಿದರು.
“ಇವನಾರವಇವನಾರವಇವನಾರವ ನೆಂದಿನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದಿನಿಸಯ್ಯ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ
ಮಗನೆಂದೆನಿಸಯ್ಯ”
ಬಸವಣ್ಣನವರ ಈ ವಚನದ ಸಾಲುಗಳುನ್ನು ನೋಡಿದಾಗ ನಮಗೆ ಪಂಪನ “ಮನುಷ್ಯಜಾತಿತಾನೊಂದೆ ವಲಂ” ಎಂಬ ಸಾಲುಗಳು ನೆನಪಿಗೆ ಬರುತ್ತವೆ. ಪಂಪ ಹತ್ತನೇ ಶತಮಾನದಲ್ಲೇ ಹೇಳಿರುವ ವಿಚಾರವನ್ನು ಬಸವಣ್ಣನವರುತಮ್ಮ ವಚನದಲ್ಲಿಜಾತಿವ್ಯವಸ್ಥೆಯನ್ನು ಮೀರಿನೀತಿಯುತ ಸಮಾಜಕಟ್ಟುವಧೋರಣೆಯನ್ನು ಈ ವಚನದಲ್ಲಿಕಾಣಬಹುದಾಗಿದೆ. ಬಸವಣ್ಣನವರು ಮಾಡಿದ ಮಹಾತ್ಕಾರ್ಯವೆಂದರೆಅಸ್ಪøಶ್ಯಜಾತಿಯಉಚ್ಛಾಟನೆಯನ್ನು ನಿರ್ಮೂಲನೆ ಗೊಳಿಸಿದ್ದು ಬಹು ಪ್ರಮುಖವಾದದ್ದು.ಅವರು ಶಿವಭಕ್ತರಾದವರನ್ನೆಲ್ಲ ಸಮಾನ ಭಾವನೆಯಿಂದಕಂಡು ಲೋಕದಲ್ಲಿತಮ್ಮ ಹೃದಯ ವೈಶಾಲ್ಯವನ್ನು ತೋರಿಸಿಕೊಟ್ಟರು. ಆ ಕಾರಣಕ್ಕಾಗಿಯೇ ಬಸವಣ್ಣ ನಮಗೆ ಪ್ರಸ್ತುತವಾಗಿ ಮತ್ತೆ ಮತ್ತೆ ಸಮಾಕಾಲೀನವಾಗಿ ನಿಲ್ಲುತ್ತಾರೆ. ಕುವೆಂಪು ಅವರುತಮ್ಮ ‘ಅನೀಕೆತನ’ ಕವಿತೆಯಲ್ಲಿ ಹೇಳುವಂತೆ “ರೂಪ ರೂಪಗಳನು ದಾಟಿ ನಾಮಕೋಟಿಗಳನು ಮೀಟಿಎದೆಯ ಬಿರಿಯೆ ಭಾವದೀಟಿಓ ನನ್ನಚೇತನ ಆಗು ನೀ ಅನೀಕೆತನ”-ಎನ್ನುವಂತೆ ನಾವುಗಳು ಸ್ಪøಶ್ಯ, ಅಸ್ಪøಶ್ಯ, ಲಿಂಗತಾರತಮ್ಯ, ಇವುಗಳನ್ನೆಲ್ಲ ಮೀರಿ ಈ ಬಂಧಗಳನ್ನು ಕಳಚಿ, ಮಾನವೀಯ ಸಂಬಂಧಗಳ ಬದುಕು ಕಟ್ಟಿಕೊಳ್ಳಬೇಕೆಂಬ ಆಶಯದ ನುಡಿಗಳು ಬಸವಣ್ಣನವರ ವಚನಗಳಿಗೆ ಸಮಕಾಲೀನ ಸ್ಪರ್ಶ ನೀಡುತ್ತವೆ.
ಬಸವಣ್ಣನವರುತಮ್ಮಒಂದು ವಚನದಲ್ಲಿ ಈಜಾತಿ ಎಂಬ ಒಂದು ಸಾಮಾಜಿಕರೋಗ ಹೇಗೆ ಹುಟ್ಟಿತೆಂಬುದನ್ನು ಈ ಕೆಳಗಿನ ವಚನದಲ್ಲಿ ಸ್ಪಷ್ಟವಾಗಿಅರ್ಥೈಸುತ್ತಾರೆ.
“ಕಾಶಿ ಕಮ್ಮಾರನಾದ ಬಿಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲಿ ಜನಿಸಿದವರುಂಟೆ ? ಜಗದೊಳಗೆ
ಇದುಕಾರಣಕೂಡಲ ಸಂಗಮದೇವಾ
ಅಂಗಸ್ಥಲವನರಿಯದವನೇಕುಲಜನು”-ಎಂಬುದು ವೃತ್ತಿಗಳೇ ಜಾತಿಗಳಾಗಿ ಪರಿವರ್ತನೆಗೊಂಡಿವೆಯೆಂಬ ಭಾವನೆಯನ್ನು ಬಸವಣ್ಣತನ್ನಿ ವಚನದಲ್ಲಿ ಸ್ಪಷ್ಟಪಡಿಸಿದ್ದನೆ. ವಚನದಕೊನೆಯಲ್ಲಿ “ಕಿವಿಯಲ್ಲಿ ಜನಿಸಿದವರುಂಟ್ಟೇ” ಎಂದು ಹೇಳುವುದರ ಮೂಲಕ ಹುಟ್ಟಿನಲ್ಲಿಎಲ್ಲರೂ ಸಮಾನರು ಎಂಬ ಅಂಶವನ್ನು ಹೇಳುತ್ತಾರೆ. ಹಾಗೆಯೇ ಮುಂದುವರೆದು ವಚನದಲ್ಲಿ
“ವೇದಕ್ಕೆಒರೆಯಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ
ತರ್ಕದ ಬೆನ್ನ ಬಾರನೆತ್ತುವೆ.
ಆಗಮದ ಮೂಗ ಕೊಯಿವೆ ನೋಡಯ್ಯ
ಮಹಾದಾನಿ ಕೂಡಲ ಸಂಗಮ ದೇವಾ,
ಮಾದಾರಚನ್ನಯ್ಯನ ಮನೆಯ ಮಗ ನಾನಯ್ಯ”-ಎಂದು ಹೇಳುತ್ತಾನೆ. ವಚನದಲ್ಲಿ ಹೇಳಿದ ಶಾಸ್ತ್ರ, ತರ್ಕ, ಆಗಮ ಇವುಗಳೊಡನೆ ಸಂಬಂಧವನ್ನು ಪಡೆದ ವರ್ಗದಿಂದ ಬಂದವನಾದರೂ; ಮೇಲ್ವರ್ಗದ ಸಂಬಂಧವನ್ನು ಧಿಕ್ಕರಿಸುವುದರ ಮೂಲಕ ತನ್ನನ್ನು ಶೋಷಿತರೊಡನೆ ಸೇರಿಸಿ ಕೊಳ್ಳುತ್ತಾನೆ.
ಎಂದು ಹೇಳುತ್ತಾ ನಮ್ಮ ಸಮಾಜಇಲ್ಲಿಯವರೆಗೆಯಾವುದನ್ನು ಶಾಸ್ತ್ರ, ಪುರಾಣ, ಧರ್ಮ, ಗ್ರಂಥಗಳು ಎಂದು ನಮ್ಮನ್ನೆಲ್ಲಒಂದುಅವ್ಯವಸ್ಥೆ ಸುತ್ತಚಿನ್ನದ ಸರಪಳಿಯಲ್ಲಿ ಸುತ್ತಿ ಮೌಢ್ಯದಅಂದಕಾರಕ್ಕೆ ತಳ್ಳಿದ್ದನ್ನು ತಿರಸ್ಕರಿಸುತ್ತಾಕಠೋರವಾಗಿಅದನ್ನುಟೀಕಿಸುತ್ತಾನೆ. “ಸ್ವರ್ಗ ಹೋದರೆ ಹೋಗಲಿ ಮತ್ತೆ ನರಕ ಬಂದರು ಬರಲಿ ಎದೆಯಧೈರ್ಯವ ಮಾಡಿ ಬಿಸಾಡಾಚೆಗೆತ್ತಿ” ಎಂದುಕುವೆಂಪು ಅವರು ಹೇಳಿರುವಂತೆ ಬಸವಣ್ಣ ಶಾಸ್ತ್ರ, ಪುರಾಣ, ಗ್ರಂಥಗಳನ್ನು ತರಾಟೆಗೆತಗೆದುಕೊಂಡು, ತರ್ಕ, ಆಗಮ ಇವುಗಳೊಡನೆ ಸಂಬಂಧವನ್ನು ಪಡೆದ ವರ್ಗದಿಂದ ಬಂದವನಾದರೂ; ತನ್ನನ್ನು ಶೋಷಿತ ಸಮುದಾಯದ ಮಾದಾರಚೆನ್ನಯ್ಯನ ಮನೆಯ ಮಗನೆಂದೆನಿಸಯ್ಯಎನ್ನುತ್ತಾನೆ. ಈ ಕಾರಣಕ್ಕೂ ಬಸವಣ್ಣ ನಮಗೆ ಒಬ್ಬ ಶ್ರೇಷ್ಠ ಮಾನವೀಯತೆಯ ಪ್ರತಿಪಾದಕನಾಗಿ ಮತ್ತೆ ಮತ್ತೆ ನಮ್ಮೆದುರು ನಿಲ್ಲುತ್ತಾನೆ.
ಈ ಎಲ್ಲಾ ಕಾರಣಗಳಿಂದ ಬಸವಣ್ಣ ನಮಗೆ ಜಗಜ್ಯೋತಿಯಾಗಿ ನಿಲ್ಲುವ ಮತ್ತುಇನ್ನು ಶತಮಾನಗಳ ಆಚೆಗೆ ಸಲ್ಲುವ ವ್ಯಕ್ತಿಯಾಗಿ, ಶಕ್ತಿಯಾಗಿ ಮತ್ತೆ ಮತ್ತೆ ಬರುತ್ತಾರೆ.ಆದರೆಒಂದು ವಿಷಾದನೀಯ ಸಂಗತಿಎಂದರೆಇಂಥ ಮಹಾನ್‍ಚೇತನವನ್ನು ನಾವು ಬೇರೊಂದುರೀತಿಯಲ್ಲಿಅವರನ್ನು ಪರಿಭಾವಿಸುತ್ತಾ, ಅವರನ್ನು ಪಕ್ವ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದ ಮನಸ್ಸುಗಳು, ರಾಜಕೀಯ ನೆಲೆಯಿಂದ, ಧರ್ಮದ ನೆಲೆಯಿಂದ, ಜಾತಿ ನೆಲೆಯಿಂದ ‘ಇವ ನಮ್ಮವ ಇವ ನಮ್ಮವ’ ಎಂದು ಕಿತ್ತಾಡಿಕೊಳ್ಳುತ್ತಾ. ಅವರ ವಿಚಾರ ಧಾರೆಗಳನ್ನು ಮತ್ತು ವ್ಯಕ್ತಿತ್ವವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು, ಸಮ ಸಮಾಜದ ಬೆಳವಣಿಗೆಗೆ ಒಂದುಆತಂಕಕಾರಿ ವಿಷಯವಾಗಿದೆ.ಒಟ್ಟಾರೆಯಾಗಿ ಬಸವಣ್ಣಜಾತಿ, ಸಮುದಾಯ, ಧರ್ಮಎಲ್ಲಾ ಮೇರೆಗಳಾಚೆ ಬದುಕಿದ ಮತ್ತು ಸಮ ಸಮಾಜದ ಸಮಾನತೆಯ ಹರಿಕಾರರಾಗಿ ವಿಶ್ವಮಾನ್ಯರೆನಿಸಿದ ವ್ಯಕ್ತಿತ್ವದವರಾಗಿದ್ದಾರೆ.ಅವರನ್ನುಯಾವುದೋಒಂದುಜಾತಿ, ಸಮುದಾಯ, ಧರ್ಮದ ನೆಲೆಯಿಂದಗುರುತಿಸದೆಅವರನ್ನು ವಿಶ್ವಮಟ್ಟ ಶ್ರೇಷ್ಠಚಿಂತಕರಾಗಿದಾರ್ಶನಿಕರಾಗಿ ನೋಡುವ ಮತ್ತುಜ್ಞಾನದಕಣ್ಣಿನಿಂದ ಬಸವಣ್ಣನವರನ್ನುಆರಾಧಿಸುವಅವರ ನುಡಿಯೊಳಗಾಗಿ ನಡೆಯುವ ಮನಸ್ಸುಗಳು ನಮ್ಮದಾಗಬೇಕುಎಂಬುದುಅವರ ಸಮ ಸಮಾಜವನ್ನುಕಟ್ಟುವ ಆಶಯಗಳ ಧನಿಯಾಗಿದೆ.

ಪ್ರವೀಣ್.ಎಚ್.ದಾಗಿನ್ಕಟ್ಟೆ
ಸಂಶೋಧನಾ ವಿಭಾಗ
ಕನ್ನಡ ಭಾರತಿ
ಕುವೆಂಪು ವಿಶ್ವವಿದ್ಯಾಲಯ
ಶಿವಮೊಗ್ಗ
ಜಂಗಮ ವಾಣಿ:-9916323020
Email ID :-bhavaneyadoni@gmail.com