ಚಿತ್ರದುರ್ಗ: ರಾಜ್ಯ ಸರ್ಕಾರ ಸದಾಶಿವ ಆಯೋಗ ನೀಡಿದ ವರದಿ ಜಾರಿಯಾದರೆ ಪರಿಶಿಷ್ಟ ಜಾತಿಯಲ್ಲಿ ಇರುವಂತ ಇತರೆ ಜಾತಿಗಳನ್ನು ಪಟ್ಟಿಯಿಂದ ತೆಗೆಯುತ್ತಾರೆ ಎಂಬ ಮಾತು ಸಹೋದರ ಜಾತಿಗಳಿಂದ ಮಾತು ಕೇಳಿ ಬರುತ್ತಿದೆ ಆದರೆ ಯಾವುದೇ ಜಾತಿಯನ್ನು ತೆಗೆಯುವ ಕೆಲಸವನ್ನು ಮಾಡದೇ ಅವರ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗುವಂತೆ ಮಾಡಲಾಗುವುದು ಎಂದು ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿದ ವರದಿಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸ್ ಮಾಡುವಂತೆವ ಆಗ್ರಹಿಸಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು ರಾಜ್ಯ ಸರ್ಕಾರ ವರದಿಯನ್ನು ಆಂಗೀಕರಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕೆಲಸವನ್ನು ಮಾಡಬೇಕಿದೆ ಆದರೆ ಇದರ ಬಗ್ಗೆ ಹಲವಾರು ಬಾರಿ ಮಾತನಾಡಿದ ಮುಖ್ಯಮಂತ್ರಿಗಳು ಇದುವರೆವಿಗೂ ಶಿಫಾರಸ್ಸು ಮಾಡದೆ ಮಾಡುತ್ತೇವೆ ಎಂದು ಹೇಳುತ್ತಾ ಬರಲಾಗಿದೆ ಈಗ ಕಾಲ ಇಲ್ಲ ಇದರ ಬಗ್ಗೆ ಶೀಘ್ರವಾಗಿ ತೀರ್ಮಾನ ತೆಗೆದುಕೊಂಡು ವರದಿಯನ್ನು ಶಿಫಾರಸ್ಸು ಮಾಡುವ ಕೆಲಸ ಮಾಡಬೇಕಿದೆ ಎಂದು ಒತ್ತಾಯಿಸಿದರು.

ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಹಲವಾರು ಭಾರಿ ಮುಖ್ಯಮಂತ್ರಿಯವರನ್ನು ಸಮಿತಿ ಒತ್ತಾಯ ಮಾಡುತ್ತಾ ಬಂದಿರ ಯಾದರೂ ಸಹಾ ಅವರು ಮುಂದೂಡುತ್ತಲೆ ಬಂದಿದ್ದಾರೆ, ರಾಜ್ಯದಲ್ಲಿ ಶೇ. ೬ ರಷ್ಟಿರುವ ಮಾದಿಗರು ನಮ್ಮ ಬೆಂಬಲಕ್ಕೆ ಇತ್ತೀಚೇಗೆ ಛಲವಾದಿಗಳ ಬಂದಿದ್ದಾರೆ ಅವರು ಶೇ. ೫ ರಷ್ಟಿದ್ದಾರೆ ಇದರಿಂದ ಶೇ.೧೧ ರಷ್ಟು ಆಯಿತು ಸರ್ಕಾರ ಶೇ. ೩ ಮತ್ತು ೪ ರಷ್ಟಿರುವ ಜಾತಿಗೆ ಹೆದರಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಕಳುಹಿಸದೇ ಇದ್ದಲ್ಲಿ ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಶ್ರೀಗಳು, ಜ. ೧೪ ರಂದು ಇದರ ಬಗ್ಗೆ ಸಭೆಯನ್ನು ಕರೆದಿರುವುದಾಗಿ ಮುಖ್ಯಮಂತ್ರಿಗಳ ಕಾರ್ಯಾಲಯ ತಿಳಿಸಿದ್ದು ಇದರಲ್ಲಿ ನಮ್ಮ ಸಹೋದರ ಜಾತಿಗಳ ಮುಖಂಡರನ್ನು ಭೇಟಿಯಾಗಿ ಮಾತುಕಥೆ ನಡೆಸುವುದಾಗಿ ತಿಳಿಸಿದ್ದಾರೆ. ಏನೇ ಆದರೂ ಸಹಾ ಸರ್ಕಾರ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶೀಫಾರಸ್ಸು ಮಾಡಲೇ ಬೇಕಿದೆ ಎಂದು ಮಾದಾರ ಚನ್ನಯ್ಯ ಶ್ರೀಗಳು ಸರ್ಕಾರದ ಮೇಲೆ ಒತ್ತಡ ಹಾಕಿದರು.

ಸಚಿವ ಸಂಪುಟದಲ್ಲಿನ ನಮ್ಮ ಸಮೂದಾಯದವರು ನಮ್ಮ ಹೋರಾಟದ ಜೊತೆಯಲ್ಲಿದ್ದಾರೆ, ಇದರ ಬಗ್ಗೆ ಯಾವುದೇ ಅನುಮಾನ ಇಲ್ಲ, ಸಚಿವ ಅಂಜನೇಯರವರು ಸಹಾ ನಮ್ಮ ಹೋರಾಟಕ್ಕೆ ಸಾಥ್ ನೀಡಿದ್ದಾರೆ ಅವರು ಸರ್ಕಾರದ ಮಟ್ಟದಲ್ಲಿ ಸಿ.ಎಂ.ರವರ ಮೇಲೆ ಒತ್ತಡವನ್ನು ಹಾಕುತ್ತಿದ್ದಾರೆ ಎಂದ ಶ್ರೀಗಳು ಜ. ೧೪ ರಂದು ನಡೆಯಲಿರುವ ಸಭೆಯಲ್ಲಿ ಸಿ.ಎಂ.ರವರು ನಮ್ಮ ಪರವಾಗಿ ಬೇರೆ ಜನಾಂಗದವರೊಂದಿಗೆ ಮಾತನಾಡಲಿದ್ದಾರೆ, ಅದು ಸಹಾ ಆಶಭಾವನೆ ಇದೆ ಇಲ್ಲಿ ನಡೆಯುವ ತೀರ್ಮಾನದ ನಂತರ ನಮ್ಮ ಹೋರಾಟ ಸಮಿತಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಶ್ರೀಗಳು ತಿಳಿಸಿದರು.
ಸ್ವಾತಂತ್ರ ಬಂದು ೭ ದಶಕಗಳು ಕಳೆದರೂ ಸಹಾ ಮಾದಿಗ ಜನಾಂಗಕ್ಕೆ ಸಾಮಾಜಿಕ ಸಾಮರಸ್ಯ ಎನ್ನುವುದು ಮರಿಚೀಕೆಯಾಗಿದೆ,
ಈಗ ಪರಿಶಿಷ್ಟ ಜಾತಿಯಲ್ಲಿ ೧೦೧ ಜಾತಿಗಳಿದ್ದು ಇದರಲ್ಲಿ ಕಡಿಮೆ ಜನಸಂಖ್ಯೆ ಮತ್ತು ಜಾಸ್ತಿ ಜನಸಂಖ್ಯೆ ಇರುವ ಜನಾಂಗಗಳಿಗೆ ಆದರೆ ಮೀಸಲಾತಿ ಮಾತ್ರ ಎಲ್ಲರಿಗೂ ಸರಿ ಸಮನಾಗಿ ಇದೆ ಇದರಿಂದ ಕೆಲವರಿಗೆ ಅನ್ಯಾಯವಾಗಲಿದೆ ಇದರ ಬದಲಾಗಿ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಮಾಡಿದರೆ ಯಾವುದೆ ಸಮಸ್ಯೆ ಇಲ್ಲದೆ ಅವರ ಪಾಲಿನ ಮೀಸಲಾತಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದ ಶ್ರೀಗಳು ನಮ್ಮ ಸಹ ಜನಾಂಗಗಳಾದ ಭೋವಿ, ಲಂಬಾಣಿ ಮತ್ತು ಇತರೆ ಜನಾಂಗದವರಿಗೆ ಮೀಸಲಾತಿ ಪಟ್ಟಿಯಿಂದ ನಮ್ಮನ್ನು ತೆಗೆಯುತ್ತಾರೆ ಎಂಬ ಅನುಮಾನ ಪ್ರಾರಂಭವಾಗಿದೆ ಆದರೆ ಈ ರೀತಿಯಾದ ಯಾವುದೇ ಅನುಮಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಶೀಫಾರಸ್ಸು ಮಾಡುವ ಕೆಲಸವನ್ನು ಮಾಡಲು ನಂತರ ಹೋರಾಟ ಸಮಿತಿಯವರು ಕೇಂದ್ರದ ಮೇಲೆ ಒತ್ತಡವನ್ನು ಹಾಕುವುದರ ಮೂಲಕ ಅದನ್ನು ಜಾರಿ ಮಾಡುವಂತೆ ಮಾಡಿಕೊಳ್ಳಲಾಗುವುದು ಎಂದ ಶ್ರೀಗಳು ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸದಿಂದ ನುಣುಚುವ ಕೆಲಸವನ್ನು ಮಾಡಬಾರದು ಎಂದು ಶ್ರೀಗಳು ಖಾರವಾಗಿ ಮಾತನಾಡಿದರು.
ಈ ಧರಣಿಯಲ್ಲಿ ಮಾದಿಗ ಜನಾಂಗದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.