ರಾಜ್ಯದಲ್ಲಿ ನಿರುದ್ಯೋಗದವರು ತುಂಬಾ ಜನ ಸಿಗ್ತಾರೆ ಅಂತಹವರಿಗೆ ಕೆಲಸ ಕೊಡುವ ಉದ್ದೇಶವಿಟ್ಕೊಂಡು ಸುಮಾರು ಕಾಲೇಜು ಗಳು ಹೊಸದಾಗಿ ಮಂಜೂರು ಮಾಡುವುದು ಬಿಟ್ಟು ಇರೋ ಕಾಲೇಜ್ ಬೇರೆಡೆಗೆ ಸ್ಥಳಾಂತರಿಸುವ ಕೆಲಸಕ್ಕೆ ಮುಂದಾಗಿರುವುದು ನಿಜವಾಗಿಯೂ ಇದು ಖಂಡನೀಯ ಹಾಗೂ ದುರುದ್ದೇಶದಿಂದ ಕೂಡಿದ ಈ ಕೆಲಸ..!

ಇಷ್ಟು ಸಣ್ಣತನದ ಕುತಂತ್ರ ಮಾಡುವ ಕೆಲಸ ಬಿಡಿ ರಾಜ್ಯದಲ್ಲಿ ಸುಮಾರು ಯುವಕ – ಯುವತಿಯರು ಕೆಲಸಕ್ಕಾಗಿ ಅಲೆದಾಡುವುದನ್ನು ನಾವುಗಳು ಕಾಣ್ತಿದೀವಿ ಅವರಿಗೆ ಕೆಲಸ ಕೊಡುವ ಯೋಚನೆಯೊಂದಿಗೆ ರಾಜ್ಯದಲ್ಲಿ ಹೊಸದಾಗಿ ಸರ್ಕಾರದಿಂದ ನೂತನವಾಗಿ ಕಾಲೇಜು ಮಂಜೂರು ಮಾಡಿ ಜೊತೆಗೆ ನಿರುದ್ಯೋಗವನ್ನು ಹೋಗಲಾಡಿಸಲು ಮುಂದಾಗಿ..!  ಭವಿಷ್ಯದ ಯುವ ನಾಗರೀಕರ ಬಗ್ಗೆ ಕಾಳಜಿಯಿರಲಿ, ರಾಜಕೀಯವಾಗಿ ಸಣ್ಣತನದ ರಾಜಕಾರಣ ಮಾಡುವುದು ಬಿಟ್ಟು ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಸಮಾನರೆಂದು ಕಾಣುವುದನ್ನು ಮರೆಯಬೇಡಿ. ಇದು ನಿಮಗೆ ಭವಿಷ್ಯದಲ್ಲಿ ಒಳ್ಳೆಯ ದಾರಿಯಾದಿತು !

ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಹತ್ತತ್ತು ಕಾಲೇಜು ಮಂಜೂರು ಮಾಡುವ ಕೆಲಸಕ್ಕೆ ಮುಂದಾಗಿ ಆಗ ಈ ಸರ್ಕಾರಕ್ಕೆ ಒಳ್ಳೆಯ ಹೆಸರು ಜೊತೆಗೆ ನಿರುದ್ಯೋಗ ನಿವಾರಿಸಲು ಸಣ್ಣ ಪ್ರಯತ್ನ ಕೂಡಾ !  ಅದು ಬಿಟ್ಟು ರಾಜಕೀಯ ದುರುದ್ದೇಶವಿಟ್ಟುಕೊಂಡು  ಮಂಜೂರಾದ ಕಾಲೇಜ್ ಸ್ಥಳಾಂತರ ಮಾಡುವುದು ಎಷ್ಟು ಸೂಕ್ತ ?  ನಿಮಗೆ ನಿಮ್ಮ ಸಾಮಾರ್ಥ್ಯ ಇದ್ದರೆ ನಿರುದ್ಯೋಗ ನಿವಾರಿಸುವ ಕೆಲಸಕ್ಕೆ ಮುಂದಾಗಿ.!

ನಿರುದ್ಯೋಗಿಗಳು ರಾಜ್ಯದಲ್ಲಿ ಕಾಣಿಸ್ತಿಲ್ಲವೇ ? ಅಂತಹವರಿಗೆ ಉಪಾಯವಾಗೋ ಕೆಲಸಕ್ಕೆ ಸರ್ಕಾರ ಮುಂದಾಗಬೇಕು.  ರಾಜ್ಯದ ಪ್ರತಿ ಜಿಲ್ಲೆಗೂ ಹೊಸದಾಗಿ ಕಾಲೇಜು ಮಂಜೂರು ಮಾಡಿಸಲು ಮುಂದಾಗಿ… ಆಗ ಸರ್ಕಾರಕ್ಕೂ ಒಳ್ಳೆಯ ಹೆಸರು ಹಾಗೂ ನಿರುದ್ಯೋಗದ ಯುವಕ – ಯುವತಿಯರಿಗೆ ಒಳ್ಳೆಯ ಕೆಲಸ ಕೊಟ್ಟಂತಾಗುತ್ತದೆ. ಒಟ್ಟಿನಲ್ಲಿ ನಿರುದ್ಯೋಗ ನಿವಾರಿಸಲು ಒಂದು ಉಪಾಯ ಮಾಡಿ.