ಚಿತ್ರದುರ್ಗ: ಬಿ.ಎನ್.ಚಂದ್ರಪ್ಪರು ಸಂಸದರಾಗಿ ನಾಲ್ಕು ವರ್ಷ, ಏಳು ತಿಂಗಳಾಗಿವೆ. ಹಲವಾರು ಜನಪರ ಕಾರ್ಯಗಳನ್ನುಮಾಡಿದ್ದಾರೆ. ಅದರಲ್ಲಿ ಬರಗಾಲದ ಜಿಲ್ಲೆಯಲ್ಲಿ ಫ್ಲೋರೈಡ್ ನೀರು ಜಾಸ್ತಿ ಇರುವುದರಿಂದ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದವರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಟ್ಯಾಂಕರ್ ಹಾಗೂ ಟ್ರ್ಯಾಕ್ಟರ್ ಗಳನ್ನು ನೀಡಿದ್ದಾರೆ. ಹೈಮಾಕ್ಸ್ ದೀಪಗಳನ್ನು ನೀಡಿದ್ದಾರೆ. ಅಂತವರ ಹುಟ್ಟು ಹಬ್ಬವನ್ನು ಆಚರಿಸುವಲ್ಲಿ ತುಂಬಾ ಖುಷಿಆಗುತ್ತದೆ ಎಂದು ಅಭಿಮಾನಿ ಬಳಗದ ಸಿ.ಪಿ ಸುಧಾಕರ್ ಕೆಳಗೋಟೆ ಅವರು ಹೇಳಿದ್ದಾರೆ.