ಚಿತ್ರದುರ್ಗ: ನಗರದ ವಿವಿಧ ದೇವಾಲಯ ಮತ್ತು ದಾರ್ಶನಿಕರ ಪ್ರತಿಮೆಗಳಿಗೆ ಬಿಜೆಪಿ ನಾಯಕ ಶ್ರೀರಾಮುಲು ಬೇಟಿ ನೀಡುವುದರ ಮೂಲಕ ದರ್ಶನ ಪಡೆದು ಮಾಲಾರ್ಪಣೆ ಮಾಡಿದರು.

ನಿನ್ನೆಯಿಂದಲೇ ಚಿತ್ರದುರ್ಗ ನಗರದ ವಿವಿಧ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಇಂದು ವಿವಿಧ ದೇವಾಲಯ ಮತ್ತು ಮಠಗಳಿಗೆ ಭೇಟಿ ನೀಡಿ ಶ್ರೀಗಳ ಆರ್ಶೀವಾದವನ್ನು ಪಡೆದರು.

ಇದೇ ಸಂದರ್ಭದಲ್ಲಿ ಶಾಸಕ ತಿಪ್ಪಾರೆಡ್ಡಿಯವರ ನಿವಾಸಕ್ಕೆ ಭೇಟಿ ನೀಡಿದಾಗ ಹಮಾಲರ ಸಂಘದ ಅಧ್ಯಕ್ಷ ಬಿ. ಬಸವರಾಜ ರವರು ಶಾಸಕ ಜಿ.ಎಚ್.ತಿಪ್ಪರೆಡ್ಡಿರವರಿಗೆ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಶ್ರೀರಾಮುಲು ರವರ ನೇತೃತ್ವದಲ್ಲಿ ತಿಳಿಸಿದರು.

ಈ ಬಾರಿ ಬಿಜೆಪಿಗೆ ಮತ ನೀಡುವುದರ ಮೂಲಕ ಗೆಲುವನ್ನು ತಂದು ಕೊಡಿ ಯಡೆಯೂರಪ್ಪರವರು ಮುಖ್ಯಮಂತ್ರಿ ಯಾಗುತ್ತಾರೆ ನಿಮ್ಮಗೆ ಇನ್ನು ಹೆಚ್ಚಿನ ಸೌಲಭ್ಯವನ್ನು ನೀಡುವ ಭರವಸೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ನಗರದ ಕೆಳಗೋಟೆ, ಕರುವಿನಕಟ್ಟೆ, ರಂಗಯ್ಯನ ಬಾಗಿಲು ಮುಖಂಡರು ಮತ್ತು ಯುವಕರು ಬಿಜೆಪಿ ಸೇರ್ಪಡೆಯಾದರು.