ಚಿತ್ರದುರ್ಗ: ವಿಚಾರವಾದಿಗಳ ವೇದಿಕೆ-ಕರ್ನಾಟಕ ಇವರಿಂದ ನೀಡುವ ಪೆರಿಯಾರ್ ಪ್ರಶಸ್ತಿಯನ್ನು ಈ ಬಾರಿ ವೈಚಾರಿಕ ಚಿಂತಕರಾದ ಮುರುಘಾಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಶರಣರಿಗೆ ನೀಡಲಾಗಿದೆ ಎಂದು ವೇದಿಕೆ ಮುಖಂಡರು, ಸಾಹಿತಿಗಳಾದ ತಲಕಾಡು ಚಿಕ್ಕರಂಗೇಗೌಡ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮಿಳುನಾಡಿನಲ್ಲಿ ವೈಚಾರಿಕ ಕ್ರಾಂತಿಯ ಹರಿಕಾರ ಆದ ಪೆರಿಯಾರ್ ಅವರ ಹಿರಿಯರು  ಇದೇ ಜಿಲ್ಲೆಯ ಹಿರಿಯೂರು ತಾಲ್ಲೂಕಿನವರು ಎಂಬುದು ವಿಶೇಷ. ಅಂತಹ ಮಹಾನ್ ವ್ಯಕ್ತಿತ್ವ ಹಾಗೂ ಪ್ರಗತಿಪರ ವಿಚಾರಗಳನ್ನು ನಾಡಿನ ಉದ್ದಗಲಕ್ಕೂ ಬಿತ್ತಿದ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದ್ದು, ರಾಜ್ಯದಲ್ಲಿ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಪ್ರಗತಿಪರರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು. ೨೦೦೮ ರಿಂದ ನೀಡಲಾಗುವ ಪ್ರಶಸ್ತಿಯನ್ನು  ವೇಮನ್, ಎ.ಕೆ.ಸುಬ್ಬಯ್ಯ, ಡಾ.ಸಿ.ಎಸ್.ದ್ವಾರಕನಾಥ್, ಡಾ.ಚಂಪಾ, ಅಗ್ನಿ ಶ್ರೀಧರ್, ಡಾ.ವೆಂಕಟಸ್ವಾಮಿ, ಯವರಿಗೆ ನೀಡಲಾಗಿತ್ತು ಈ ವರ್ಷ ಮುರುಘಾ ಶರಣರಿಗೆ ನೀಡಲು ವೇದಿಕೆ ನಿರ್ದರಿಸಿದೆ ಎಂದು ಹೇಳಿದರು. ಇದೇ ತಿಂಗಳು ೨೧ ರಂದು ಬೆಂಗಳೂರಿನ ಸನೆಟ್ ಹಾಲ್ ನಲ್ಲಿ ನಡೆಯವ ಪೆರಿಯಾರ್ ಅವರ ೧೩೬ ನೇ ಜಯಂತಿ ಸಂದರ್ಭದಲ್ಲಿ ಪ್ರಶಸ್ತಿ ನಿಡಲಾಗುವುದು. ಈ ಪ್ರಶಸ್ತಿಯು ೨೫ ಸಾವಿರ ನಗದು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುರುಘಾರಾಜೇಂದ್ರ ಒಡೆಯರ್, ಹನುಮಂತಪ್ಪ ದುರ್ಗ, ಮಣಿವಣ್ಣನ್, ನರೇನಹಳ್ಳಿ ಅರುಣಕುಮಾರ್, ಡಾ.ಎಂ.ವೆಂಕಟಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.