ಬೆಂಗಳೂರು: ನಡೆದಾಡುವ ದೇವರು ಶಿವಕುಮಾರ ಶ್ರೀಗಳು  ಇಚ್ಛಾಮರಣಿ ಎಂದು  ಡಾ.ರವೀಂದ್ರ ಹೇಳಿದ್ದಾರೆ.

ಶ್ರೀ ಗಳ ಆರೋಗ್ಯ ವೈದ್ಯ ಡಾ.ರವೀಂದ್ರ ಅವರು ಮಾತನಾಡಿ ಶ್ರೀಗಳು  ಬಯಸುವವರೆಗೆ ಚಿಕಿತ್ಸೆ ನೀಡುತ್ತೇವೆ. ಅವರ ದೇಹದ ಪ್ರೊಟೀನ್ ಅಂಶದಲ್ಲಿ ಸುಧಾರಣೆ ಆಗಿದೆ ಎಂದರು.

ಆದರೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹಾಗಾಗಿ ಅವರಿಗೆ ಸ್ವಯಂ ಆಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಮಯ ಬೇಕು. ಶ್ರೀಗಳಿಗೆ 112 ವರ್ಷ ವಯಸ್ಸು, ಈ ವಯಸ್ಸಿನಲ್ಲಿ 6 ಬಾರಿ ಎಂಡೋಸ್ಕೋಪಿ ಮಾಡಿಸಿಕೊಂಡಿದ್ದು, ಈಗಲೂ ಓಡಾಡುತ್ತಿದ್ದಾರೆ ಎಂದರೆ ದೈವೀ ಸಂಭೂತರು ಎಂದು ಹೇಳಿದರು.