ಬೆಂಗಳೂರು: ಇದು ಚುನಾವಣೆಯ ಇಫೆಕ್ಟ್. ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿ ಗೊಳಿಸಿದ ಬಳಿಕ ರಾಜಕೀಯ ಪಕ್ಷಗಳು ತಮ್ಮ ಜಾಹಿರಾತಿನ ಫಲಕಗಳನ್ನು ಸಾರ್ವಜನಿಕವಾಗಿ ಹಾಕುವಂತಿಲ್ಲ ಎಂದು ಆದೇಶಿಸಿದ್ದು, ಕಾಂಗ್ರೆಸ್ ಪಕ್ಷದ ‘ಹಸ್ತ’ ಚಿಹ್ನೆಯನ್ನು ಹೋಲುವ ಜ್ಯೋತಿಷಿಗಳ ಫಲಕಗಳನ್ನು ಸಾರ್ವಜನಿಕವಾಗಿ ಹಾಕುವಂತಿಲ್ಲ ಎಂದು  ಚುನಾವಣಾಧಿಕಾರಿಗಳು ಆದೇಶಿಸಿದ್ದಾರೆ. 

ಇಂತಹ ಬೋರ್ಡ್ ಗಳ ಮೇಲೆ ಪೇಪರ್ ಹಾಕಿ ಮುಚ್ಚಲಾಗಿದ್ದು, ಇದರಿಂದ ನಮಗೆ ತೊಂದರೆಯಾಗಲಿದೆ ಎಂದು ಜ್ಯೋತಿಷಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಎಂಬುದು ಸುದ್ದಿ.

Edit