ಚಿತ್ರದುರ್ಗ: ಶುದ್ದವಾದ ನೀರನ್ನು ಸೇವನೆ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಗ್ರಾಮಸ್ಥರಿಗೆ ಕರೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಗೊಲ್ಲನಕಟ್ಟೆ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣ ಮಾಡಲಾದ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು ಇಂದಿನ ದಿನದಲ್ಲಿ ಕೊಳವೆಬಾವಿಗಳ ಆಳವಾಗಿ ಹೋಗುತ್ತಿರುವುದರಿಂದ ಅದರಲ್ಲಿ ಪೋರೈಡ್ ಮಿಶ್ರತವಾದ ನೀರು ಬರುತ್ತಿದ್ದು ಇದನ್ನು ಸೇವನೆ ಮಾಡುವುದರಿಂದ ವಿವಿಧ ರೋಗಗಳಿಗೆ ಬಲಿಯಾಗಬೇಕಿದೆ ಇದರಿಂದ ಶುದ್ದವಾದ ನೀರನ್ನು ಉಪಯೋಗ ಮಾಡಿ ಎಂದು ಶಾಸಕರು ತಿಳಿಸಿದರು.
ರೋಗ ಬಂದಾಗ ಅಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ಎಚ್ಚರವಹಿಸುವುದು ಅಗತ್ಯ ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡುವ ವಸ್ತುಗಳಲ್ಲಿ ನೀರು ಸಹಾ ಒಂದಾಗಿದ್ದು ಇದು ಶುದ್ದವಾಗಿದ್ದರೆ ಆರೋಗ್ಯವೂ ಸಹಾ ಉತ್ತಮವಾಗಿರುತ್ತದೆ ಇದರಿಂದ ಹಣ ನೀಡಿದರು ಪರವಾಗಿಲ್ಲ ಶುದ್ದವಾದ ನೀರನ್ನು ಸೇವನೆ ಮಾಡಿ ರೋಗ ಬಂದಾಗ ಔಷಧಿಗೆ ಹಣ ನೀಡುವ ಬದಲು ಮುಂಚೆಯೇ ಹಣ ನೀಡಿ ನೀರನ್ನು ಸೇವೆನೆ ಮಾಡಿ ಎಂದು ಗ್ರಾಮಸ್ಥರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಜೆ.ಎನ್.ಕೋಟೆ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಚಂದ್ರಪ್ಪ, ಗ್ರಾಮ ಮುಖಂಡರಾದ ತಿಮ್ಮಣ್ಣ, ಕರಿಯಪ್ಪ, ತಿಪ್ಪೇಸ್ವಾಮಿ, ಮಾರಪ್ಪ, ನಾಗರಾಜ್ ಚಂದ್ರಶೇಖರ್ ಭಾಗವಹಿಸಿದ್ದರು.