ಚಿತ್ರದುರ್ಗ: ಧರ್ಮದ ಹುಟ್ಟಿಗೆ ಶರಣ ಚಳುವಳಿ ಬಹು ಮುಖ್ಯ. ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನ ಹೇಳಿದರು.

ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡುತ್ತಿದ್ದರು. ಮಾನವೀಯ, ಧಾರ್ಮಿಕ ಮಹಾಪುರುಷರನ್ನು ನೆನೆಪಿಸಕೊಳ್ಳುವ ಸಂಸ್ಕೃತಿಯಾಗಿದೆ. ಶರಣ ಸಂಸ್ಕೃತಿ ಉತ್ಸವದ ಮೂಲಕ ಶ್ರೀಗಳು ಈ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಭಾಷಣಕ್ಕೆ ಸೀಮಿತವಾಗದೇ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸವಾಗಿಲ್ಲ. ಮಾನವರು ದಾನವರಾಗದೆ ಮನುಷ್ಯತ್ತ್ವ ಬೆಳೆಸಿಕೊಳ್ಳಲು ಅನೇಕ ಶ್ರೀಗಳಿಂದ ಬಸವ ತತ್ತ್ವದ ಉದಾತ್ತ ವಿಷಯಗಳನ್ನು ಪ್ರತಿನಿತ್ಯ ಜನರಿಗೆ ತಲುಪಿಸುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ.

ವಾಲ್ಮೀಕಿ, ಕನಕ ಪೀಠ, ಅಂಬೇಡ್ಕರ್ ಭವನದ ಅಭಿವೃದ್ದಿಗೆ ಶ್ರಮಿಸಿದೆ. ನನಗೆ ಗೊತ್ತಿರುವುದು ಒಂದೇ ಜಾತಿ ಅದು ಮಾನವ ಜಾತಿ. ನಮ್ಮಲ್ಲಿ ಹಣದ ಕೊರತೆಯಿಲ್ಲ, ಬೇರೆಬೇರೆ ಅಭಿವೃದ್ದಿ ಕೆಲಸಗಳಿಗೆ ಬಳಸುತ್ತಿದ್ದೇವೆ. ಶ್ರೀಮಠದ ಹಿಂಭಾಗದಲ್ಲಿ ೩೨೫ ಅಡಿ ಎತ್ರರದ ಬಸವೇಶ್ವರರ ಕಂಚಿನ ಪುತ್ಥಳಿ ಕಾಮಗಾರಿ ಚಾಲನೆಯಲ್ಲಿದೆ. ಅದಕ್ಕೆ ಮುಂದಿನ ಬಜೆಟ್‌ನಲ್ಲಿ ೨೫ಕೋಟಿ ಮೀಸಲಿಟ್ಟು ಪೂರ್ಣಗೊಳಿಸುತ್ತೇವೆ. ರಾಜ್ಯದ ಪ್ರವಾಸದ್ಯೋಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ನಮ್ಮ ಮೊದಲ ಆದ್ಯತೆ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು. ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ನೀಡುತ್ತೇವೆ. ಸಾಸ್ವೆಹಳ್ಳಿಯ ಯೋಜನೆಯನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳುತ್ತೇವೆ ಎಂದರು.