ಚಿತ್ರದುರ್ಗ: ಶ್ರೀಮಠದ ಅನುಭವ ಮಂಟಪದಲ್ಲಿ ಮಕ್ಕಳಮೇಳ ಕಾರ್ಯಕ್ರಮದಲ್ಲಿ ಜೀ ಟೀವಿ ಕನ್ನಡ ಕಣ್ಮಣಿ ಪ್ರಶಸ್ತಿ ವಿಜೇತೆ ಉಡುಪಿಯ ಸಂಹಿತಾ, ಜೀ ಟೀವಿ ಕನ್ನಡ ಕಣ್ಮಣಿ ಪ್ರತಿಭೆ ಹುಬ್ಬಳ್ಳಿಯ ಶ್ರೇಯಾ ಭಾಷಣ, ಜೀ ಟೀವಿ ಸರಿಗಮಪ ಪ್ರಶಸ್ತಿ ವಿಜೇತ ಓಂಕಾರ ಪತ್ತಾರ, ಕಲರ್‍ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ಪ್ರತಿಭೆ ಕೊಪ್ಪಳದ ಅರ್ಜುನ ಇಟಗಿ, ಕನ್ನಡ ಕೋಗಿಲೆ ಪ್ರತಿಭೆ ಹುಬ್ಬಳ್ಳಿಯ ಮಹನ್ಯ ಗುರುಪಾಟೀಲ ಸುಗಮ ಸಂಗೀತ, ಡ್ರಾಮಾ ಜೂನಿಯರ್ ಪ್ರತಿಭೆ ಚಿ.ಯತೀಶ ಏಕಪಾತ್ರಾಭಿನಯ, ಶಿರಸಿಯ ಭರತನಾಟ್ಯ ಪ್ರತಿಭೆ ಚಿ. ಸೌಭಾಗ್ಯ ಹಂದ್ರಾಳ ನೃತ್ಯ, ಯೋಗ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಕಿ ಉಡುಪಿಯ ಚಿ.ತನುಶ್ರೀ ವಿಶೇಷ ಯೋಗ, ಬೆಂಗಳೂರು ಯತೀಶ್ ಇವೆಂಟ್ಸ್ ಹಾಗೂ ರಮೇಶ್ ನಿರ್ದೇಶಿತ ಮಕ್ಕಳ ತಂಡಗಳು ಸಮೂಹ ನೃತ್ಯ ಹಾಗೂ ತಮಿಳುನಾಡಿನ ಚಿ.ವೈಷ್ಣವಿ ಸಾಹಸ ಪ್ರದರ್ಶನವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಶ್ರೀ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಹೊಸದುರ್ಗದ ಕುಂಚಿಟಿಗ ಗುರುಪೀಠದ ಡಾ.ಬಸವಶಾಂತವೀರಸ್ವಾಮಿಗಳು, ಶರಣ ಸಂಸ್ಕೃತಿ ಉತ್ಸವದ ಸಮಿತಿ ಕಾರ್‍ಯಾಧ್ಯಕ್ಷರಾದ ಹನುಮಲಿ ಷಣ್ಮುಖಪ್ಪ ಉಪಸ್ಥಿತರಿದ್ದರು.

ಕಾರ್‍ಯಕ್ರಮದಲ್ಲಿ ನೆರೆ ಸಂತ್ರಸ್ತರ ರಕ್ಷಣೆಯಲ್ಲಿ ಸಾಹಸ ಮೆರೆದ ಬಾಲಪ್ರತಿಭೆ ದೇವದುರ್ಗದ ಚಿ. ವೆಂಕಟೇಶ ದೇವೆಂದ್ರಪ್ಪ ಸಂಕನೂರು ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಕಣ್ಮಣಿ ಪ್ರತಿಭೆ ಚಿತ್ರದುರ್ಗದ ಚಿ.ನಿನಾದ ನಿರೂಪಿಸಿದರು.