ಚಿತ್ರದುರ್ಗ : ಶರಣಸಂಸ್ಕೃತಿ ಉತ್ಸವದ ಮಹಾದಾಸೋಹಕ್ಕೆ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಪಟೇಲ್ ಶಿವಕುಮಾರ್, ಶ್ರೀಮತಿ ಕವಿತಾ ಪಟೇಲ್ ಶಿವಕುಮಾರ್, ಪುತ್ರ ಅಭಿಷೇಕ್ ಪಟೇಲ್, ಆದರ್ಶ ಪಟೇಲ್ ಅವರುಗಳು ಉಚಿತವಾಗಿ ಎರಡು ಲಾರಿ ಅಕ್ಕಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು, ಉತ್ಸವ ಸಮಿತಿ ಕಾರ್‍ಯದರ್ಶಿ ಡಿ.ಎಸ್. ಮಲ್ಲಿಕಾರ್ಜುನ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ.ಈ. ಚಿತ್ರಶೇಖರ್, ಕಾರ್‍ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ವೀರೇಂದ್ರಕುಮಾರ್, ಉಪಸ್ಥಿತರಿದ್ದರು.