ಚಿತ್ರದುರ್ಗ: ಡಾ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ ಕೃಷಿಕ ಸಮುದಾಯ ಇಂದು ನೈಸರ್ಗಿಕ ಪ್ರಕೋಪ, ಅನಾವೃಷ್ಟಿಯ ನಡುವೆ ಸಿಕ್ಕಿಹಾಕಿಕೊಂಡು ಸಂಕಷ್ಟ ಅನುಭವಿಸುತ್ತಿದೆ. ಅದರಲ್ಲೂ ಮಧ್ಯ ಕರ್ನಾಟಕ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು, ಕೃಷಿ ಹೇಗೆ ಮಾಡಬೇಕು ಎನ್ನುವ ಪ್ರಯೋಗಗಳು ನಡೆಯುತ್ತಿವೆ. ರೈತರಿಗೆ ಮಾರ್ಗದರ್ಶನ ನೀಡಿ ಬೆಳೆ ಬೆಳೆಯುವ ವಿಧಾನ ತಿಳಿಸಲು ಕೃಷಿ ಮೇಳ ಆಯೋಜಿಸಿದ್ದೇವೆ ಜಲಕ್ಷಾಮ ದೂರಮಾಡಲು ಜಲಾಂಧೋಲನ ಅಥವಾ ಜನಾಂಧೋಲನ ಮಾಡಬೇಕು. ಎಲ್ಲಾ ಧರ್ಮದ ನೇತಾರರು ಜೊತೆ ಜೊತೆಯಲ್ಲಿ ಜಲದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಕರ್ನಾಟಕದಲ್ಲಿ ಜಲಸಂರಕ್ಷಣದ ಬಗ್ಗೆ ಆಯೋಜನೆ ಮತ್ತು ಕಾರ್ಯಕ್ರಮಗಳನ್ನು ಮಾಡುವುದು ಒಳ್ಳೆಯದು ಎಂದರು.
ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಜೈಪುರದ ಜಲಸಂಪನ್ಮೂಲ ತಜ್ಞರಾದ ರಾಜೇಂದ್ರ ಸಿಂಗ್ ಡಾ. ಶಿವಮೂರ್ತಿ ಮುರುಘಾ ಶರಣರು ಜಲಸಂಪನ್ಮೂಲದ ಬಗ್ಗೆ ಚರ್ಚಿಸಿದರು. ನಮ್ಮನ್ನು ಕರೆದಿರುವುದು ಅತ್ಯಂತ ಶ್ಲಾಘನೀಯ. ಜಲ ಸಂರಕ್ಷಣೆ ಬಗ್ಗೆ ನಾವು ಜಾಗೃತರಾಗಬೇಕು. ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಇದರ ಮೂಲಕ ರಾಜಸ್ಥಾನ ಮತ್ತು ಕರ್ನಾಟಕದ ಮಧ್ಯೆ ಉತ್ತಮ ಸಂಬಂಧ ಏರ್ಪಡಬೇಕೆಂದರು.
ನೀರಿನ ಬಗ್ಗೆ ರಾಜಸ್ಥಾನದಲ್ಲಿ ನಡೆದಿರುವ ಬಗ್ಗೆ ನಿಮಗೆ ಪರಿಚಯವಾಗಬೇಕಿದೆ. ಕರ್ನಾಟಕದಲ್ಲಿ ರಾಜಕಾರಣಿಗಳು ಓಟಿಗಾಗಿ ನೀರನ್ನು ಕೊಡುತ್ತೇವೆ ಎಂದು ಹೇಳುತ್ತಾರೆ. ಇಲ್ಲಿ ನೀರಿನ ಸಂಗ್ರಹಣೆ ಸರಿಯಾದ ರೀತಿಯಲ್ಲಿ ಇಲ್ಲ. ಆದುದರಿಂದ ನೀರಿನ ಭವಣೆ ಕರ್ನಾಟಕದಲ್ಲಿ ಹೆಚ್ಚಾಗಿದೆ. ನೀರಿನ ಸಂಗ್ರಹಣೆ ಕುರಿತು ಹೆಚ್ಚು ಜಾಗೃತಿ ಮೂಡಬೇಕಿದೆ. ರಾಜಸ್ಥಾನದ ಭೂ ರಚನೆ ಕರ್ನಾಟದಕದಂತೆಯೇ ಇದೆ. ಭೂಪದರದಲ್ಲಿರುವ ಎಲ್ಲಾ ನೀರನ್ನು ರಾಜಸ್ಥಾನದಲ್ಲಿ ೫ ಲಕ್ಷ ಒಣಗಿದ್ದ ಬಾವಿಗಳಿಗೆ ನೀರಿನ ಮರುಪೂರಣ ಮಾಡಿದ್ದೇವೆ. ಕರ್ನಾಟಕದಲ್ಲಿ ಅದರಲ್ಲೂ ಚಿತ್ರದುರ್ಗದಲ್ಲಿ ಈ ಕೆಲಸ ಆಗಬೇಕಿದೆ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಾದರೂ ಮಳೆಯ ಪ್ರಮಾಣ ಕಡಿಮೆಯಾಗಿಲ್ಲ. ಸಿವಿಲ್ ಇಂಜಿನಿಯರ್‌ಗಳಿಗೆ ನೀರಿನ ಮರುಪೂರಣದ ಬಗ್ಗೆ ಪಠ್ಯಗಳನ್ನು ಇಡದಿರುವುದರಿಂದ ಮಾಹಿತಿಯ ಕೊರತೆಯಾಗಿದೆ ಎಂದರು.
ಆದರೆ ಇಂದು ಜಲಮರುಪೂರಣದಿಂದ ಉಳಿಮೆ ಮಾಡಿ ಅವರಿಗೆ ಕೆಲಸ ಕೊಡುವಷ್ಟು ಸಮರ್ಥರಾಗಿದ್ದಾರೆ. ಸಾತ್ವಿಕ ವ್ಯಕ್ತಿಗಳ ಜೊತೆಗೆ ನಾವು ಕೆಲಸ ಮಾಡಲು ಸದಾ ಸಿದ್ದ ಎಂದರು.
ಜಗಳೂರಿನ ಮಾಜಿ ಶಾಸಕರಾದ ಶ್ರೀ ಗುರುಸಿದ್ದನಗೌಡ ಮಾತನಾಡಿ ನನ್ನ ಅವಧಿಯಲ್ಲಿ ಎಂದೂ ಕುಡಿಯುವ ನೀರಿಗೆ ಸಮಸ್ಯೆಯಾಗಲಿಲ್ಲ. ೩೦೦ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದೆ ಎಂದು ಹೇಳಿದರು.
ತುಮಕೂರು ಸಿದ್ದಗಂಗಾ ಮಠದ ಶ್ರೀ ನಿ.ಪ್ರ.ಸ್ವ. ಸಿದ್ದಲಿಂಗ ಮಹಾಸ್ವಾಮಿಗಳು, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಿ.ಇ.ಓ ಶ್ರಿ ಪಿ.ಎನ್. ರವೀಂದ್ರ ಮಾತನಾಡಿದರು.
ಸಮಾರಂಭದಲ್ಲಿ ಕೃಷಿ ಬೆಲೆ ನೀತಿ ಆಯೋಗದ ಅಧ್ಯಕ್ಷರಾದ ಪ್ರಕಾಶ ಕಮ್ಮರಡಿ, ರೈತ ಸಂಘದ ಶ್ರೀ ಕೆ.ಟಿ ಗಂಗಾಧರ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಕೃಷಿ ಮತ್ತು ಕೃಗಾರಿಕೆ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಶರಣ ಸಂಸ್ಕೃತಿ ಉತ್ಸವದ ಕಾರ್ಯಾದ್ಯಕ್ಷರಾದ ಶ್ರೀ ಸಿ.ಶಂಕರಮೂರ್ತಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ನಾಯ್ಕ, ಕಾರ್ಯದರ್ಶಿ ಸಿದ್ದಾಪುರದ ಪಟೇಲ್ ಶಿವಕುಮಾರ್, ಉಪಸ್ಥಿತರಿದ್ದರು.