ಚಿತ್ರದುರ್ಗ : ಚಿತ್ರದುರ್ಗ ನಗರದಲ್ಲಿ ವೈದ್ಯಕೀಯ ತುರ್ತು ಸೇವೆಗಾಗಿ 20 ಆಟೋರಿಕ್ಷಾ ಮತ್ತು 10 ಟೂರಿಸ್ಟ್ ಟ್ಯಾಕ್ಸಿಗಳಿಗೆ ಪಾಸ್ ನೀಡಲಾಗಿದ್ದು, ಇಂತಹ ಪಾಸ್ ಹೊಂದಿಲ್ಲದೇ ಇರುವ ಆಟೋರಿಕ್ಷಾ ಮತ್ತು ಟ್ಯಾಕ್ಸಿ ವಾಹನಗಳನ್ನು ಜಪ್ತು ಮಾಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ ಅವರು ತಿಳಿಸಿದ್ದಾರೆ.

ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಲಾಕ್‍ಡೌನ್ ಜಾರಿಯಲ್ಲಿದೆ.  ಹೀಗಾಗಿ ಎಲ್ಲ ಬಗೆಯ ಪ್ರಯಾಣಿಕರ ವಾಹನಗಳನ್ನು ನಿರ್ಬಂಧಿಸಿದ್ದು, ಅಗತ್ಯ ಸಾಮಗ್ರಿಗಳ ಸರಕು ಸಾಗಾಣಿಕೆ ವಾಹನಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.  ಚಿತ್ರದುರ್ಗ ನಗರದಲ್ಲಿ ವೈದ್ಯಕೀಯ ತುರ್ತು ಸೇವೆಗಳಿಗಾಗಿ 20 ಆಟೋರಿಕ್ಷಾ ಮತ್ತು 10 ಟೂರಿಸ್ಟ್ ಟ್ಯಾಕ್ಸಿಗಳಿಗೆ ಪಾಸ್ ನೀಡಲಾಗಿದ್ದು, ಪಾಸ್ ಪಡೆದಿರುವ ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳು ತಮಗೆ ನೀಡಲಾಗಿರುವ ಪಾಸ್ ಅನ್ನು ಪ್ರದರ್ಶಿಸಿ ಸಂಚಾರ ಮಾಡಬೇಕು.  ಪಾಸ್ ಇಲ್ಲದೇ ಇರುವ ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳು ರಸ್ತೆಯ ಮೇಲೆ ಸಂಚರಿಸುತ್ತಿರುವುದು ಕಂಡುಬಂದಲ್ಲಿ, ಅಂತಹ ವಾಹನಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಂಡು ವಾಹನ ಜಪ್ತಿ ಮಾಡಲಾಗುವುದು.  ತುರ್ತು ಸೇವೆಗೆ ಆಟೋರಿಕ್ಷಾ ಅಥವಾ ಟ್ಯಾಕ್ಸಿ ಬೇಕಿದ್ದಲ್ಲಿ ಮೊಬೈಲ್ ಸಂಖ್ಯೆ, 9449864016,  9008368017, 9108906938, 9449545299, 9900096699 ಕ್ಕೆ ಸಂಪರ್ಕಿಸಬಹುದು.