ಚಿತ್ರದುರ್ಗ: ಕಳೆದು ಹೋದದನ್ನು ನೆನಪಿಸಿಕೊಳ್ಳುತ್ತಾ ಇರುವ ಬದುಕನ್ನು ಹಾಳು ಮಾಡಿಕೊಳ್ಳುವುದು ಲಕ್ಷಣವಲ್ಲ, ಇಲ್ಲದವರಿಗೆ ಸಹಾಯ ಮಾಡುವುದು ಉತ್ತಮವಾದ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗದ ವೀರಶ್ಯವ ಸಮಾಹ ಉತ್ತಮವಾದ ಕಾರ್ಯವನ್ನು ಮಾಡುತ್ತದೆ ಇದನ್ನು ಎಲ್ಲಡೆ ತಿಳಿಸಿವುದಾಗಿ ಎಂದು ಶಿವಮೊಗ್ಗದ ಬಸವಕೇಂದ್ರದ ಶ್ರೀ ಮರಳಸಿದ್ದಶ್ವರ ಶ್ರೀಗಳು ನುಡಿದರು.
ಚಿತ್ರದುರ್ಗ ನಗರದ ವಿರಶೈವ ಸಮಾಜದವತಿಯಿಂದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಮರು ವಿವಾಹ ಬಯಸುವ ವೀರಶೈವ ವಿಧವೆ. ವಿಧುರ.ವಿಚ್ಛೇದಿತ ಹಾಗೂ ಸಶಕ್ತ ವಿಕಲಚೇತನರ ರಾಜ್ಯಮಟ್ಟದ ೩ ನೇ ಮುಖಾಮುಖಿ ಸಂದರ್ಶನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ಪುಣ್ಯದ ಕಾರ್ಯವಾಗದೆ ಸಮಾಜದಲ್ಲಿ ವಿವಿದ ರೀತಿಯ ಕಾರ್ಯಗಳು ನಡೆಯುತ್ತವೆ. ಆದರೆ ಈ ರೀತಿಯಾದ ನೊಂದವರಿಗೆ ಸಹಾಯದ ಹಸ್ತವನ್ನು ಚಾಚುವ ಕಾರ್ಯ ನಿಜಕ್ಕೂ ಉತ್ತಮವಾಗಿದೆ. ಈ ಕಾರ್ಯವನ್ನು ಶಿವಮೂರ್ತಿ ಮುರುಘಾ ಶರಣರು ಹಿಂದೇಯೆ ಪ್ರಾರಂಭ ಮಾಡಿದ್ದರು ಆದರೆ ಆಗ ಸಮಾಜ ಒಪ್ಪಿಕೊಳ್ಳದೆ ತಿರಸ್ಕಾರ ಮಾಡಿತು, ಆದರೆ ಇಂದಿನ ದಿನಮಾನದಲ್ಲಿ ಇಂತಹರಿಗೂ ಸಹಾ ಬದುಕು ಇದೆ ಇಲ್ಲಿಗೆ ಮುಗಿಯಲಿಲ್ಲ ಎಂದು ತೋರಿಸುವುದರ ಮೂಲಕ ಅವರಲ್ಲಿ ಮತ್ತೇ ಬದುಕ ಉತ್ಸಾಹವನ್ನು ತುಂಬ ಬೇಕಿದೆ ಎಂದು ಹೇಳಿದರು.
ಮನುಷ್ಯ ತನ್ನ ಜೀವನದಲ್ಲಿ ಕೆಲವೊಂದು ಘಟನೆಗಳನ್ನು ಮರೆಯದೆ ಅವುಗಳನ್ನು ಮೆಲುಕು ಹಾಕುತ್ತಾ ತನ್ನ ಜೀವನವನ್ನು ಕಳೆಯುತ್ತಾನೆ ಅದರಲ್ಲೊ ಸಂತೋಷದ ಘಟನೆಗಳಿಗಿಂತ ದುಃಖದ ಘಟನೆಗಳನ್ನು ಹೆಚ್ಚಾಗಿ ನೆನಪು ಮಾಡುತ್ತಾ ತನ್ನ ಮುಂದಿನ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಆದರೆ ಪ್ರಾಣಿಗಳಾಗಲಿ,ಪಕ್ಷಿಗಳಾಗಲಿ ಕಳೆದು ಹೋದ ಬದುಕನ್ನು ನೆನಪಿಸಿಕೊಳ್ಳದೆ ತಮ್ಮ ಜೀವನವನ್ನು ಸಾಗಿಸುತ್ತಾರೆ ಈ ರೀತಿಯ ಬದಕನ್ನು ಮಾನವ ರೂಢಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಅಧ್ಯಕ್ಷರಾದ ಜಯಕುಮಾರ್ ಆಧ್ಯಕ್ಷತೆವಹಿಸಿದ್ದರು. ಕಳೆದ ಹಲವಾರು ವರ್ಷಗಳಿಂದ ಈ ಕಾರ್ಯಕ್ರಮವನ್ನು ಮಾಡುತ್ತಾ ಬಂದಿರುವ ಹರೀಶ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ೫೦ಕ್ಕೂ ಹೆಚ್ಚು ಆಂಕಾಕ್ಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.