ಚಿತ್ರದುರ್ಗ : ತಾಲ್ಲೂಕಿನ ಲಿಂಗದಹಳ್ಳಿ ಸುಲ್ತಾನಿಪುರದಲ್ಲಿ ಆಂಜನೇಯ ದೇವಾಲಯದ ಬಳಿ ಐತಿಹಾಸಿಕ ಸುಂದರವಾದ ವೀರಮಾಸ್ತಿಗಲ್ಲು ಶಿಲ್ಪವಿದ್ದು, ಪ್ರಾಚ್ಯವಸ್ತು ಇಲಾಖೆ ಮತ್ತು ಗ್ರಾಮಸ್ಥರು ರಕ್ಷಿಸಲು ಮುಂದಾಗಬೇಕೆಂದು ಕವಿಸಣ್ಣಗೌಡ್ರು ನಾಗರಾಜ್ ಹೇಳಿದ್ದಾರೆ.

ವೀರಮಾಸ್ತಿಗಲ್ಲು ಶಿಲ್ಪವಿದ್ದು ಮೂರು ಹಂತಗಳಲ್ಲಿದೆ. ಕೆಳಗಿನ ಹಂತದಲ್ಲಿ ಕುದುರೆಯೆನ್ನೇರಿ ಹೋರಾಡುವ ಚಿತ್ರಣವಿದೆ. ಎರಡನೇ ಹಂತದಲ್ಲಿ ಸ್ತ್ರೀಯೊಬ್ಬಳು ವೀರನೊಬ್ಬನ ಕತ್ತನ್ನು ಸೀಳುವ ಚಿತ್ರವಿದೆ. ಮೇಲಿನ ಹಂತದಲ್ಲಿ ಸೂರ್ಯ ಚಂದ್ರ ಚಿತ್ರಣವಿದೆ. ಸ್ತ್ರೀಯು ತನ್ನ ಎರಡು ಕೈಗಳನ್ನು ಮೇಲೆತ್ತಿದ್ದಾಳೆ ಮತ್ತು ಸಾಯುಜ್ಯ ಪದವಿ ಪಡೆಯುವ ಚಿತ್ರಣವಿದೆ.

ಈ ಶಿಲ್ಪವನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿದೆ. ಇದು ವಿಜಯನಗರ ಅರಸರ ಕಾಲಕ್ಕೆ ಸೇರಿದ್ದೆಂದು ಕವಿಸಣ್ಣಗೌಡ್ರು ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ

ಈ ನಂಬರ್ ಗೆ ಪೋನ್ ಮಾಡಬಹುದು. ಕವಿಸಣ್ಣಗೌಡ್ರು  9964502826