ಚಿತ್ರದುರ್ಗ: ಬೇದ್ರೆ ಆಟ್ರ್ಸ್‍ನಿಂದ ತ್ಯಾಗರಾಜಬೀದಿಯಲ್ಲಿ ಆಚರಿಸಿದ ವಿಶ್ವ ಓಜೋನ್ ದಿನಾಚರಣೆಯಲ್ಲಿ 20 ಕ್ಕೂ ಹೆಚ್ಚು ಮಕ್ಕಳು ಪ್ರಾಣಿ ಹಾಗೂ ಪಕ್ಷಿಗಳ ಮುಖವಾಡವನ್ನು ಧರಿಸಿ ಎಲ್ಲರೂ ಪರಿಸರವನ್ನು ರಕ್ಷಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.

ಹುಲಿ, ಸಿಂಹ, ಚಿರತೆ, ಮಂಕಿ, ಹಸು, ಕರಡಿ, ಕತ್ತೆ, ಗಿಳಿ, ನವಿಲು, ನಿಸರ್ಗ ಸೂರ್ಯ ಹೀಗೆ ವಿವಿಧ ಬಗೆಯ ಪ್ರಾಣಿ ಹಾಗೂ ಪಕ್ಷಿಗಳ ಮುಖವಾಡವನ್ನು ಧರಿಸಿ ಇರುವುದೊಂದೆ ಭೂಮಿಯನ್ನು ಎಲ್ಲರೂ ರಕ್ಷಿಸಿ ಪರಿಸರವನ್ನು ಉಳಿಸಬೇಕಾಗಿದೆ. ಪಕ್ಷಿ ಪ್ರಾಣಿಗಳು ಉಳಿಯಬೇಕಾದರೆ ಮಾಲಿನ್ಯವಿಲ್ಲದೆ ಹಬ್ಬಗಳನ್ನು ಆಚರಿಸಬೇಕು. ವಿಶೇಷವಾಗಿ ಗಣಪತಿ ಹಬ್ಬದಲ್ಲಿ ನೂರಾರು ಗಣಪತಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಪಕ್ಷಿ ಹಾಗೂ ಜಲಚರಗಳು ಸಾವಿಗೀಡಾಗುತ್ತವೆ ಎಂಬುದನ್ನು ಮಾನವ ಮೊದಲು ತಿಳಿದುಕೊಂಡರೆ ಭೂಮಿಯ ಮೇಲಿನ ಮಾಲಿನ್ಯವನ್ನು ಕಡಿಮೆಗೊಳಿಸಬಹುದು ಎಂದು ವಿಶ್ವ ಓಝೋನ್ ದಿನಾಚರಣೆಯ ಸಂದೇಶವನ್ನು ಮಕ್ಕಳು ಸಾರಿದರು.

ಮೇಘರಾಜ್, ವಿನುತ್, ಡಿ.ನಾಗರ್, ಬಿ.ಜೈನ್, ಧನ್ವಿ, ಊರ್ಮಿಳ ಕೆ.ಸುತಾರ್, ವರುಣ್‍ಬೇದ್ರೆ, ರಾಧಿಕ, ಮನೀಷ, ಧ್ವನಿತ್, ಜಪ್ರಿನ್, ಪ್ರಹ್ಲಾದ್, ಕುಷ್ಕರ್‍ಭಾನು, ಸತ್ಯಭೋದ, ಅಬ್ದುಲ್, ಪರಿಸರ ತಜ್ಞ ಹೆಚ್.ಎಸ್.ಕೆ.ಸ್ವಾಮಿ, ಚಿತ್ರಕಲಾವಿ ನಾಗರಾಜ್‍ಬೇದ್ರೆ ಈ ಸಂದರ್ಭದಲ್ಲಿ ಹಾಜರಿದ್ದರು.