ಚಿತ್ರದುರ್ಗ: ವಿಶ್ವಪರಿಸರ ದಿನಾಚರಣೆ ಅಂಗವಾಗಿ ನಗರಸಭೆಯಿಂದ ಸೋಮವಾರ ಸಂತೆಹೊಂಡದ ಸುತ್ತ ಮೆಟ್ಟಿಲುಗಳ ಮೇಲೆ ಬೆಳೆದಿದ್ದ ಕುರುಚಲು ಗಿಡಗಳನ್ನು ಸ್ವಚ್ಚಗೊಳಿಸಲಾಯಿತು.
ಭರಮಣ್ಣನಾಯಕನ ಕಾಲದ ಸಂತೆಹೊಂಡದ ಸುತ್ತಲೂ ಮೆಟ್ಟಿಲುಗಳ ಮೇಲೆ ಬೆಳೆದಿದ್ದ ಗಿಡ ಹುಲ್ಲುಗಳನ್ನು ಕಿತ್ತು ಪೌರ ಕಾರ್ಮಿಕರು ಬೆಳಗಿನಿಂದಲೇ ಸ್ವಚ್ಚತೆಯಲ್ಲಿ ತೊಡಗಿದ್ದರು. ಐತಿಹಾಸಿಕ ಪುರಾತನ ಕಾಲದ ಸಂತೆಹೊಂಡ, ಪುಷ್ಕರಣಿಗಳನ್ನು ಮಲಿನಗೊಳಿಸದೆ ಶುದ್ದವಾಗಿಟ್ಟುಕೊಳ್ಳುವಂತೆ ಜನತೆಯಲ್ಲಿ ಅರಿವು ಮೂಡಿಸಿದ ನಗರಸಭೆ ಸಿಬ್ಬಂದಿ ಹೊಂಡದ ನೀರನ್ನು ಗಲೀಜು ಮಾಡುವವರಿಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿತು.
ನಗರಸಭೆ ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಸರಳ, ಭಾರತಿ, ಮಂಜು ಸ್ವಚ್ಚತೆಯಲ್ಲಿ ಪಾಲ್ಗೊಂಡಿದ್ದರು.