ಚಿತ್ರದುರ್ಗ:ರಾಷ್ಟ್ರಾದ್ಯಂತ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಗುತ್ತದೆ. ಅವರ ತತ್ತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಪ್ರೊ.ಸಿ.ಬಸವರಾಜಪ್ಪ ಹೇಳಿದರು.

ನಗರದ ಎಸ್.ಜೆ.ಎಂ. ಮಹಿಳಾ ಕಾಲೇಜಿನ ಐಕ್ಯೂಎಸಿ ವತಿಯಿಂದ ೧೫೫ನೇ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ವಿವೇಕಾನಂದರು ವಿದ್ಯಾರ್ಥಿಯಾಗಿದ್ದಾಗಲೇ ತಿಳಿದುಕೊಳ್ಳಬೇಕೆಂಬ ಹಂಬಲ ಅವರಿಗಿತ್ತು. ರಾಷ್ಟ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದರು. ನನ್ನ ಪ್ರೀತಿಯ ಅಕ್ಕ-ತಂಗಿಯರೇ, ಅಣ್ಣ-ತಮ್ಮಂದಿರೇ ಎಂದಾಗ ಅಮೆರಿಕಾದಲ್ಲಿ ಅವರ ಹೆಸರು ಜನಜನಿತವಾಯಿತು. ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರಿಂದ ನಮ್ಮಲ್ಲಿ ಸಾಕಷ್ಟು ಜನ ಪ್ರಭಾವಿತರಾದರು ಎಂದರು.

ಜಯಮ್ಮ ಮಾತನಾಡಿ, ನಾವು, ನಮ್ಮದು ಎಂಬ ಭಾವನೆ ನಮಗೆ ಬೇಕು. ಅಂದಾಗ ಮಾತ್ರ ಭಾರತ ಉದ್ಧಾರವಾಗಲು ಸಾಧ್ಯ. ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂಬ ವಿವೇಕಾನಂದರ ಆಶಯಗಳನ್ನು ಈಡೇರಿಸಬೇಕು ಎಂದರು.

ಭಾರತಿ ಮಾತನಾಡಿ, ಯಾರ ಸಹಾಯವೂ ಇಲ್ಲದೆ ದೊಡ್ಡ ಹಂತದ ಸಾಧನೆ ಮಾಡಿದವರು ಸ್ವಾಮಿ ವಿವೇಕಾನಂದರು. ರಾಷ್ಟ್ರದ ಅಭಿವೃದ್ಧಿ ಜ್ಞಾನದ ಮೂಲಕ ಆಗಬೇಕು ಎಂದವರು. ಮನುಷ್ಯನಿಗೆ ಮನೋಬಲ, ಆತ್ಮಬಲ ಬಹಳ ಮುಖ್ಯ ಎಂದರು.
ಮಂಜುಶ್ರೀ ಮಾತನಾಡಿ, ದಿವ್ಯ ಶ್ರೀ ಮಾತನಾಡಿ, ಮಂಜುಳ, ಸಮನ ಮಾತನಾಡಿದರು. ವೇದಿಕೆಯಲ್ಲಿ ಪ್ರೊ. ವೀರೇಂದ್ರಕುಮಾರ್, ಪ್ರೊ.ಎಸ್.ಬಿ. ಶಿವಕುಮಾರ್, ಪ್ರೊ. ಎನ್.ವಿ. ಗಾಯತ್ರಿ, ಎನ್. ಚೆಲುವರಾಜು, ಮಕ್ಸೂದ್‌ಅಹಮದ್, ಪ್ರೊ. ರಜಪೂತ್, ಡಾ. ಸುಧಾರಾಣಿ ಮೊದಲಾದವರಿದ್ದರು.
ಕು| ಮೀರಾಯಾದವ್ ಸ್ವಾಗತಿಸಿದರು. ಕು| ನಪೀಜಾ ನಿರೂಪಿಸಿದರು. ಪ್ರೊ. ಎಲ್. ರಾಜಾನಾಯ್ಕ ವಂದಿಸಿದರು.