ಚಿತ್ರದುರ್ಗ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018 ರ ನಿಮಿತ್ತ ಚಿತ್ರದುರ್ಗ ಜಿಲ್ಲೆಯ ಗಡಿ ವ್ಯಾಪ್ತಿಯಲ್ಲಿ 41 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜೋತ್ಸ್ನ ತಿಳಿಸಿದ್ದಾರೆ.

ತಾಲ್ಲೂಕುವಾರು ಚೆಕ್‍ಪೋಸ್ಟ್‍ಗಳ ವಿವರ ಹೀಗಿದೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಾತಪ್ಪನಗುಡಿ, ಬೋಗೇನಹಳ್ಳಿ, ಮಲ್ಲಸಮುದ್ರ, ಗರಣಿ ಕ್ರಾಸ್, ನಾಯಕನಹಟ್ಟಿ ಕೆ.ಇ.ಬಿ. ಸರ್ಕಲ್, ಎದ್ದಲಬೊಮ್ಮನಹಟ್ಟಿ, ತಮ್ಮೇನಹಳ್ಳಿ, ಉಡೇವು, ವಡೇರಹಳ್ಳಿ ಹಾಗೂ ಹೊಸೂರು,

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೊಗಳೇರಹಟ್ಟಿ, ಆಪೋಸಿಟ್ ಕೆ.ಇ.ಬಿ. ಚಿತ್ರದುರ್ಗ ರೋಡ್, ನಾಯಕನಹಟ್ಟಿ ಕ್ರಾಸ್ ಬಳ್ಳಾರಿ ರೋಡ್, ಆಪೋಸಿಟ್ ರೋಜ ಹೋಟೆಲ್ ಬೆಂಗಳೂರು ರೋಡ್, ನಾಗಪ್ಪನಹಳ್ಳಿ ಗೇಟ್, ದೊಡ್ಡಚೆಲ್ಲೂರು, ಕಾಮಸಮುದ್ರ ವಿಲೇಜ್.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ಯಾದಿಗೆರೆ ಗೇಟ್ ಎನ್.ಹೆಚ್.4 ರೋಡ್, ಕೆಳಗಳಹಟ್ಟಿ ಗೇಟ್ ಚಳ್ಳಕೆರೆ ರೋಡ್ ಎಸ್.ಹೆಚ್.48 ರೋಡ್, ವಡ್ಡರಪಾಳ್ಯ ವಿಲೇಜ್ ಬಿ.ದುರ್ಗ ರೋಡ್, ಕಣಿವೆ ಕ್ರಾಸ್ ಎನ್.ಹೆಚ್.13 ಹೊಳಲ್ಕೆರೆ ರೋಡ್, ಮಾಳಪ್ಪನಹಟ್ಟಿ ಕ್ರಾಸ್ ಎನ್.ಹೆಚ್.13 ರೋಡ್, ಇನ್‍ಫ್ರಂಟ್ ಆಫ್ ತಿಪ್ಪಾರೆಡ್ಡಿ ಹೌಸ್ ಬಿಡಿ.ರೋಡ್, ಪಿಳ್ಳಿಕೇರನಹಳ್ಳಿ ಸರ್ಕಾರಿ ಸ್ಕೂಲ್ ಎನ್.ಹೆಚ್.13 ರೋಡ್,

ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಖಂಡೇನಹಳ್ಳಿ, ಪಿ.ಡಿ.ಕೋಟೆ ಕ್ರಾಸ್, ಗೊಲ್ಲಹಳ್ಳಿ, ಗುಯಿಲಾಳು ಟೋಲ್, ಗೋಕುಲ್‍ನಗರ, ವಿ.ವಿ.ಪುರ ಹಾಗೂ ಇನ್‍ಫ್ರಂಟ್ ಆಫ್ ರಂಜಿತ ಹೋಟೆಲ್,

ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬುರುಡೆಕಟ್ಟೆ, ಗಡಿ ಅಹಮದ್‍ನಗರ, ಭಾಗಶೆಟ್ಟಿಹಳ್ಳಿ, ಚಿಕ್ಕಬ್ಯಾಲದಕೆರೆ, ಹೆಗ್ಗೆರೆ ಹಾಗೂ ಹರಿಯನಹಳ್ಳಿ (ಬೆಲಗೂರು),

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಣಿವೆಹಳ್ಳಿ, ದುಮ್ಮಿಗೇಟ್, ಸಾಸಲು ಹಳ್ಳ, ಎಮ್ಮೇನಹಟ್ಟಿ ಈ ಸ್ಥಳಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ.