ಬೆಂಗಳೂರು: ಲಾಕ್ ಡೌನ್ ಜಾರಿಯಾಗಿರುವುದರಿಂದ 3 ತಿಂಗಳು ವಿದ್ಯುತ್ ಬಿಲ್ ಪಾವತಿಸಲು ವಿನಾಯಿತಿ ನೀಡಲಾಗಿಲ್ಲವಂತೆ ಹಾಗೂ  ಬಿಲ್ ಕಟ್ಟ ಬೇಕು ಇದರಿಂದ ಕರೆಂಟ್ ಶಾಕ್ ಹೊಡೆದಿದ್ದು, ಗ್ರಾಹಕರಿಗೆ.

ವಿದ್ಯುತ್ ಬಿಲ್ ಪಾವತಿಗೆ ಮೂರು ತಿಂಗಳು ವಿನಾಯಿತಿ ನೀಡುವ ಕುರಿತಾಗಿ ಕೇಂದ್ರ ಇಂಧನ ಸಚಿವಾಲಯ ರಾಜ್ಯ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಯಾವುದೇ ಸೂಚನೆ ಬಂದಿಲ್ಲ. ಇಂಧನ ಇಲಾಖೆ ಸ್ಪಷ್ಟನೆ ನೀಡಿದ್ದು, ಗ್ರಾಹಕರಿಗೆ ತೊಂದರೆ ಆಗದಂತೆ ಹಿಂದಿನ ತಿಂಗಳ ಅಥವಾ ಸರಾಸರಿ ಬಿಲ್ ವಿತರಿಸಲಾಗುವುದು ಎಂದು ಹೇಳಲಾಗಿದೆ.

ಗ್ರಾಹಕರು ತಮ್ಮ ಹಿಂದಿನ ತಿಂಗಳ ಬಿಲ್ ಮೊತ್ತವನ್ನು ಪಾವತಿಸಬೇಕು. ಈ ಬಿಲ್ ಗಳನ್ನು ಇ -ಮೇಲ್, ವಾಟ್ಸಾಪ್ ಅಥವಾ ಎಸ್‌ಎಂಎಸ್ ಮೂಲಕ ಗ್ರಾಹಕರಿಗೆ ಕಳುಹಿಸಲಾಗುವುದು. ನಿಗದಿತ ಕೌಂಟರ್ ಗಳಲ್ಲಿ ವಿದ್ಯುತ್ ಬಿಲ್ ಕಟ್ಟಬಹುದು. ಇಲ್ಲವಾದರೆ ಆನ್ಲೈನ್ ಮೂಲಕ ಬಿಲ್ ಪಾವತಿಸಬಹುದಾಗಿದೆ ಎಂದು ಹೇಳಲಾಗಿದೆ.