ಚಿತ್ರದುರ್ಗ: ಸಾಸಲಹಟ್ಟಿಗ್ರಾಮದಲ್ಲಿಎಸ್.ಜೆ.ಎಂ.ಮಹಿಳಾ ಮಹಾವಿದ್ಯಾಲಯ ಅಯೋಜಿಸಿರುವ ಎನ್.ಎಸ್.ಎಸ್. ಘಟಕ ೧ ಮತ್ತು ೨ರ ಯೋಜನೆಯನ್ನು ಉದ್ಘಾಟಿಸಿ, ಮಾತನಾಡಿದ ಅವರು ನಾನು ಈಗಾಗಲೇ ೫೫ಕ್ಕೂ ಹೆಚ್ಚು ಶಿಬಿರಗಳನ್ನು ಕಳೆದ ೨೫ ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇನೆ. ಶಿಬಿರಾರ್ಥಿಗಳು ಪ್ರೀತಿಯಿಂದ ಊರಿನ ಜನರ ಮನಸ್ಸನ್ನುಗೆಲ್ಲಬೇಕು. ಸಾಂಪ್ರದಾಯಿಕ ಶಿಕ್ಷಣದಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಸಾಧ್ಯವಿಲ್ಲ. ಅದನ್ನು ಇಂತಹ ಶಿಬಿರದ ಮೂಲಕ ಜನರ ಪ್ರೀತಿಗಳಿಸಿ, ಆ ಓರೆಗಳನ್ನು ತಿದ್ದಬೇಕು. ನಾವು ಎನ್.ಎಸ್.ಎಸ್. ಸಿದ್ಧಾಂತಗಳನ್ನು ಒಪ್ಪಿಕೊಳ್ಳಬೇಕು ಮತ್ತು ಅಪ್ಪಿಕೊಳ್ಳಬೇಕು. ನಮ್ಮ ಮನಸ್ಸು ನೆರಳು ಮತ್ತು ಕನ್ನಡಿಯೋಪದಿಯಲ್ಲಿರಬೇಕು. ಎನ್.ಎಸ್.ಎಸ್.ಸ್ವಯಂ ಸೇವಕರು ಕಾರ್ಮಿಕರಲ್ಲ. ಇತರರಿಗೆ ಅರಿವು ಮೂಡಿಸುವವರು. ಇದು ಸೇವೆಯ ಮೂಲಕ ಕಲಿಯುವ ಶಿಕ್ಷಣ.ಪ್ರಶಸ್ತಿ, ಪುರಸ್ಕಾರಗಳು ಮುಖ್ಯವಲ್ಲ, ನಮ್ಮ ಸಾಧನೆ ಮುಖ್ಯ ಎಂದರು.

ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಇಲ್ಲಿನ ಅನುಭವಗಳನ್ನು ವಿದ್ಯಾರ್ಥಿಗಳು ನಾಳಿನ ಬದುಕನ್ನಾಗಿಸಿಕೊಳ್ಳಬೇಕು. ನನಗೆ ಇಂತಹ ಸಂದರ್ಭ ಬಂದಿದ್ದರಿಂದ ನಾವು ಇಂದು ಒಂದಷ್ಟು ಶಿಸ್ತು ಬೆಳೆಸಿಕೊಳ್ಳಲು ಸಾಧ್ಯವಾಯಿತು. ಇಂದು ಹಳ್ಳಿಗಳು ಒಳ್ಳೆಯ ವಾತಾವರಣದಿಂದ ಹೊರಬರುತ್ತಿವೆ. ಆದರೆ ಶಿಬಿರಾರ್ಥಿಗಳು ಹಳ್ಳಿಗಳಿಗೆ ಬಂದು ಒಳ್ಳೆಯ ವಾತಾವರಣ ಸೃಷ್ಠಿಸುವುದರೊಂದಿಗೆ ಸೌಹಾರ್ಧಯುತವಾದ ಬದುಕನ್ನು ನಡೆಸಲು ಅನುವು ಮಾಡಿಕೊಡಬೇಕು. ಇದರಿಂದ ಊರಿನ ಜನರಿಗೆ ನಿಮ್ಮನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸಮುದಾಯವನ್ನು ತರಗತಿಗೆ, ತರಗತಿಗಳನ್ನು ಸಮುದಾಯಗಳೊಂದಿಗೆ ಬೆಸೆಯಬೇಕು. ಇಲ್ಲದಿರುವ ಜಾಗದಲ್ಲಿ ಜೀವನ ಮಾಡುವುದೇ ಒಂದು ಸವಾಲು. ಶಿಬಿರದ ಸಂದರ್ಭದಲ್ಲಿ ಗ್ರಾಮೀಣ ಬದುಕಿನ ನೈಜತೆಯನ್ನು ವಿದ್ಯಾರ್ಥಿಗಳು ಬರೆಯಬೇಕು.

ಎಸ್.ಜೆ.ಎಂ.ಕಾಲೇಜಿನ ಪ್ರಾಧ್ಯಾಪಕರಾದ ಪಿ.ಸಿ.ಗಾಯಿತ್ರಿ, ಪ್ರಾಂಶುಪಾಲರಾದ ಪ್ರೊ.ಸಿ.ಬಸವರಾಜಪ್ಪ
ಆಶಾ ಕಾರ್ಯಕರ್ತೆಯಾದ ಹೇಮಲತಾ, ಅಂಗನವಾಡಿ ಕಾರ್ಯಕರ್ತೆಯಾದ ಬೋರಮ್ಮ ಗ್ರಾಮ ಪಂಚಾಯಿತಿ ಸದಸ್ಯರಾದ ಈಶಪ್ಪ, ಎನ್.ಎಸ್.ಎಸ್. ಅಧಿಕಾರಿಗಳಾದ ಡಾ.ಜಯಣ್ಣ, ಶ್ರೀ ಎಲ್. ರಾಜಾನಾಯ್ಕ ಉಪಸ್ಥಿತರಿದ್ದರು.