ಚಿತ್ರದುರ್ಗ: ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾದಾಗ ಮಾತ್ರ ದೇಶ ಪ್ರಗತಿಯತ್ತ ಸಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿದಿಸೆಯಿಂದಲೇ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳಸಿಕೊಳ್ಳುವಂತೆ ಪದ ನಿಮಿತ್ತ ಉಪ ನಿರ್ದೇಶಕರಾದ ಶ್ರೀಮತಿ ಲೀಲಾವತಿ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ೨೦೧೫-೧೬ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಗರದ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬೆಳಕಿನ ಉಪಯೋಗಗಳು ಸಾಧ್ಯತೆ ಮತ್ತು ಸವಾಲುಗಳ ಬಗ್ಗೆ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ದೇಶ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವುದರಿಂದ ಮೊದಲ ಸ್ಥಾನದಲ್ಲಿದೆ. ದೇಶ ಅಭಿವೃದ್ದಿ ದೇಶಗಳ ಸಾಲಿನಲ್ಲಿ ನಿಲ್ಲಬೇಕಾದರೆ ವೈಜ್ಞಾನಿಕ ಕ್ಷೇತ್ರದಲ್ಲಿ ಹೆಚ್ಚಿನ ಅಭೀವೃದ್ದಿಯನ್ನು ಸಾಧಿಸಬೇಕಿದೆ. ತಂತ್ರಜ್ಞಾನದ ರಾಜಧಾನಿ ನಮ್ಮ ರಾಜ್ಯದಲ್ಲಿದೆ ಎಂಬುದು ನಮ್ಮಗೆ ಹೆಮ್ಮೆಯಾಗಿದೆ. ಮನುಷ್ಯ ನಾಗರೀಕತೆ ಬೆಳದಂತೆ ವಿಜ್ಞಾನವು ಸಹ ಅವನ ಜೊತೆಯಲ್ಲಿ ಬೆಳೆಯುತ್ತಾ ಬಂದಿದೆ. ವಿಜ್ಞಾನದ ತಳಹದಿಯ ಮೇಲೆಯೆ ಮನುಷ್ಯನ ಬದುಕು ಸಾಗುತ್ತಿದೆ. ಈ ಹಿನ್ನಲೆಯಲ್ಲಿ ಮನುಷ್ಯನ ದಿನ ನಿತ್ಯದ ಬದುಕಿನಲ್ಲಿ ವಿಜ್ಞಾನದ ಪಾತ್ರ ಅತಿ ಮುಖ್ಯವಾಗಿದೆ ಎಂದು ಲೀಲಾವತಿ ಹೇಳಿದರು.
ನಮ್ಮ ಬದುಕಿನಲ್ಲಿ ವೈಚಾರಿಕ ವಿಚಾರಗಳನ್ನು ಅಳವಡಿಸಿಕೊಳ್ಳುವುದೇ ವಿಜ್ಞಾನವಾಗಿದೆ. ಇದನ್ನು ಅಳವಡಿಸಿಕೊಂಡಲ್ಲಿ ಮಾನವನ ಬದುಕು ಅಭೀವೃದ್ದಿಯತ್ತ ಸಾಗಲು ಸಾಧ್ಯವಿದೆ. ವಿಜ್ಞಾನ ಈಗ ಬೆಳಕಿಗೆ ಬಂದಿದ್ದಲ್ಲ, ಅದು ಪುರಾತನ ಕಾಲದಿಂದಲೂ ಮನುಷ್ಯರ ಜೊತೆಯಲ್ಲಿ ಇದೆ ಆಗ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಿರಲಿಲ್ಲ ಆದರೆ ಈಗ ಹೆಚ್ಚಿನ ಪ್ರಮಾಣದಲ್ಲಿ ಜನತೆ ಅದರ ಮೇಲೆ ಅವಲಂಬಿತರಾಗಿದ್ದಾರೆ.ದೇಶದ ಪ್ರಧಾನ ಮಂತ್ರಿಗಳು ಸಹಾ ಇದಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಅದಕ್ಕಾಗಿ ಸಚಿವಾಲಯವನ್ನು ಸ್ಥಾಪನೆ ಮಾಡಿದ್ದಾರೆ ಎಂದ ಅವರು, ವಿಜ್ಞಾನ ಬರೀ ಮುಖ್ಯ ನಗರದ ಮಕ್ಕಳಿಗೆ ಮಾತ್ರವೆ ತಿಳಿಯಬಾರದು ಅದು ಎಲ್ಲಾ ಮಕ್ಕಳನ್ನು ತಲುಪಬೇಕು ಎಂಬ ದೃಷ್ಟಿಯಿಂದ ಗ್ರಾಮಾಂತರ ಮಟ್ಟದಿಂದ ರಾಷ್ಟರ ಮಟ್ಟದವರೆಗೂ ಇಂತರ ಸ್ಪರ್ಧೆಗಳನ್ನು ಇಲಾಖೆಯ ಮೂಲಕ ಏರ್ಪಡಿಸಿ ವಿದ್ಯಾರ್ಥಿಗಳನ್ನು ವಿಜ್ಞಾದೆಡೆಗೆ ಸೆಳೆಯುವ ಕಾರ್ಯವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಶಾಲಾ ಮಟ್ಟದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ತಿಳಿಸುವುದು ಮಾತ್ರವಲ್ಲದೆ ಅದರ ಬಗ್ಗೆ ಅಸಕ್ತಿಯನ್ನು ಮೂಡಿಸುವ ಸಣ್ಣ ಪ್ರಮಾಣದ ಪ್ರಯೋಗಗಳನ್ನು ಮಾಡಿಸಬೇಕಿದೆ. ಇದರಿಂದ ಅವರಲ್ಲಿನ ವಿಜ್ಞಾನ ಆಸಕ್ತಿ ಹೊರಗೆ ಬರಲು ಸಾಧ್ಯವಿದೆ. ವಿದ್ಯಾರ್ಥಿಗಲು ಸಹಾ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸಿಕೊಂಡು ಸಮಯ ಸಿಕ್ಕಾಗ ಅವುಗಳಿಗೆ ಸಂಬಂಧಪಟ್ಟ ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಓದುವುದರ ಮೂಲಕ ಅವರು ಯಾವ ರೀತಿ ಪ್ರಯೋಗಗಳನ್ನು ಮಾಡಿದ್ದಾರೆ ಅದರಿಂದ ಏನನ್ನು ಕಂಡು ಹಿಡಿದರು ಎಂಬುದನ್ನು ತಿಳಿಯುವಂತೆ ಶ್ರೀಮತಿ ಲೀಲಾವತಿ ಕರೆ ನೀಡಿದರು.
ಶಿಕ್ಷಣ ಇಲಾಖೆಯ ವಿದ್ಯಾಧಿಕಾರಿ ಎಸ್.ಕೆ.ಬಿ.ಪ್ರಸಾದ್ ಮಾತನಾಡಿ ಈ ರೀತಿಯ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಅವಕಾಶಗಳು ನಮಗೆ ಓದುವಾಗ ಸಿಕ್ಕಿಲ್ಲ, ನಿಮಗೆ ಸಿಕ್ಕಿದೆ ಅದರ ಸದುಪಯೋಗ ಸರಿಯಾದ ರೀತಿಯಲ್ಲಿ ಆಗಬೇಕಿದೆ. ಅವಕಾಶಗಳು ವಿಫಲವಾಗಿದೆ ಅವುಗಳ ಸದ್ಬಳಕೆ ಸರಿಯಾದ ರೀತಿಯಲ್ಲಿ ಆಗಬೇಕಿದೆ. ಬೆಳಕಿನ ಬಗ್ಗೆ ವಿವಿಧ ರೀತಿಯ ಪ್ರಯೋಗವನ್ನು ಮಾಡಬಹುದಾಗಿದೆ. ಇಲ್ಲಿ ತಿಳಿಸುವ ವಿಷಯವನ್ನು ನೋಟು ಮಾಡಿಕೊಂಡು ಮುಂದೆ ಅದರ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ತಿಳಿಯುವ ಕಾರ್ಯ ಮಾಡುವಂತೆ ಹೇಳಿದರು.
ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಜಯಣ್ಣ, ಡಯಟ್ ಉಪ ಪ್ರಚಾರ್ಯರಾದ ಎನ್.ಎಂ.ರಮೇಶ್, ಡಯಟ್ ಉಪನ್ಯಾಸಕರಾದ ಪ್ರಕಾಶ್, ವಿಷಯ ಪರಿವೀಕ್ಷಕರಾದ ನಾಗರಾಜ್,  ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುರೇಶ್ ರಾಜು ಭಾಗವಹಿಸಿದ್ದರು. ಶಿಕ್ಷಣ ಸಂಯೋಜಕರಾದ ಶ್ರೀಮತಿ ಪದ್ಮ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರೆ ಏಕನಾಥ್ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸಂಗೀತಾ ವಂದಿಸಿದರೆ ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ಚಿತ್ರದುರ್ಗ ತಾಲ್ಲೂಕಿನ ಹಲವಾರು ಶಾಲೆಯ ನೂರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.