ಚಿತ್ರದುರ್ಗ: ವಿಕಲಚೇತನರು ದೈಹಿಕವಾಗಿ ವಿಕಲಾಂಗರಾಗಿರಬಹುದೆ ಆದರೆ ಅವರು ಮಾನಸಿಕವಾಗಿ ಸಧೃಡರಾಗಿದ್ದಾರೆ, ಅದೇ ರೀತಿ ವಿಕಲಚೇತನರು ಸಹಾ ಮಾನಸಿಕವಾಗಿ ಕುಗ್ಗದೆ ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಿ ನಿಮ್ಮ ಜೊತೆ ಸರ್ಕಾರ ಮತ್ತು ಸಮಾಜ ಇದೆ ಎಂದು ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಆಂಜನೇಯ ವಿಕಲಾಂಗರಿಗೆ ಧೈರ್ಯದ ಮಾತುಗಳನ್ನಾಡುವುದರ ಮೂಲಕ ಆವರಲ್ಲಿ ಆತ್ಮಸ್ಥರ್ಯವನ್ನು ತುಂಬವ ಕೆಲಸ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮತ್ತು ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು, ಜಿಲ್ಲೆಯ ಎಲ್ಲಾ ತಾಲ್ಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರುಗಳ ಸಂಯುಕ್ತಾಶ್ರಯದಲ್ಲಿ ನಗರದ ತ.ರಾ.ಸು. ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ-೨೦೧೭ನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವೊಮ್ಮೆ ಪ್ರಕೃತಿಯ ವಿರುದ್ದ ಮಕ್ಕಳ ಜನನವಾಗುತ್ತದೆ, ಇದಕ್ಕೆ ಅಪೌಷ್ಟಿಕತೆ ಅಥವಾ ಗರ್ಭೀಣಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆಯದೇ ಇರುವುದರಿಂದ ಈ ರೀತಿಯಾದ ವಿಕಲಾಂಗ ಮಕ್ಕಳ ಜನನವಾಗುತ್ತದೆ ಇದರಿಂದ ಅವರ ಪೋಷಕರಾಗಲಿ ಅಥವಾ ವಿಕಲಾಂಗ ಮಕ್ಕಳಾಗಲಿ ಧೈತಿಗೆಡಬಾರದು ಇವರಿಗಾಗಿ ಸರ್ಕಾರಗಳು ವಿವಿಧ ರೀತಿಯ ಸೌಲಭ್ಯಗಳನ್ನು ನೀಡಿದೆ ಅದರ ಸದುಪಯೋಗದಿಂದ ಪ್ರಗತಿಯನ್ನು ಸಾಧಿಸಬೇಕಿದೆ ಎಂದು ಸಚಿವರು ಕರೆ ನೀಡಿದರು.
ಸರ್ಕಾರ ಇಂತಹವರಿಗಾಗಿ ಉದ್ಯೋಗದಲ್ಲಿ ಮೀಸಲಾತಿ, ಸಾಲ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯವನ್ನು ನೀಡಿದೆ ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದರ ಮೂಲಕ ಸಮಾಜ ಮುಖಿಯಾಗಬೇಕಿದೆ. ನೀವು ದೈಹಿಕವಾಗಿ ಅಂಗವಿಕಲತೆಯನ್ನು ಹೊಂದಿರಬಹುದು ಆದರೆ ಮಾನಸಿಕವಾಗಿ ವಿಶಿಷ್ಟವಾದ ಶಕ್ತಿಯನ್ನು ಹೊಂದಿದ್ದಾರೆ, ಇದಕ್ಕೆ ನಮ್ಮ ಜಿಲ್ಲೆಯಲ್ಲಿ ಕಲಸ ಮಾಡಿದ ಮಂಜುಶ್ರೀ ಉದಾಹರಣೆಯಾಗಿದ್ದಾರೆ, ಇವರಂತೆ ಬಹಳಷ್ಟು ವಿಕಲಾಂಗ ಜನತೆ ಸಾಧನೆ ಮಾಡಿದ್ದಾರೆ. ನಿಮ್ಮ ದೇಹದಲ್ಲಿ ಮಾತ್ರ ನ್ಯೂನತೆ ಇದೆ ಆದರೆ ಮಾನಸಿಕವಾಗಿ ನೀವುಗಳು ಸಾಮಾನ್ಯರಿಗಿಂತ ಗಟ್ಟಿಯಾಗಿದ್ದೀರಾ ಎಂದ ಸಚಿವರು. ಶಿಕ್ಷಣವನ್ನು ಪಡೆಯುವುದರ ಮೂಲಕ ನಿಮ್ಮ ಬದುಕನ್ನು ಸುಂದರಾಗಿ ರೂಪಿಸಿಕೊಳ್ಳಿ ಇದೇ ರೀತಿ ಸಾಧನೆ ಮಾಡುವ ಛಲವನ್ನು ಬೆಳಸಿ ಕೊಳ್ಳುವಂತೆ ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ವಿಕಲಾಂಗರಾದರೂ ಸಹಾ ಸಾಧನೆ ಮಾಡುವ ಆತ್ಮವಿಶ್ವಾಸವನ್ನು ಬೆಳಸಿಕೊಳ್ಳಿ ಸರ್ಕಾರಗಳು ನಿಮ್ಮ ಅಭೀವೃದ್ದಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡಿದೆ ಅವುಗಳ ಸದುಪಯೋಗ ಪಡೆಯಿರಿ, ನೀವುಗಳು ರಕ್ಷಣ ಇಲಾಖೆಯ ಮತ್ತು ಪೋಲಿಸ್ ಇಲಾಖೆಯ ಕೆಲವೊಂದು ಹುದ್ದೆಗಳನ್ನು ಬಿಟ್ಟರೆ ಬೇರೆ ಎಲ್ಲಾ ಕಡೆಯಲ್ಲಿಯೂ ನೀವುಗಳು ಕೆಲಸ ಮಾಡಬಹುದಾಗಿದೆ ಇದಕ್ಕೆ ಸರ್ಕಾರವು ಸಹಾ ಮನ್ನಣೆ ನೀಡಿದೆ ಎಂದರು.
ಕಲವಡೆಯಲ್ಲಿ ವಿಕಲಚೇತನರ ಹೆಸರಿನಲ್ಲಿ ಶಾಲೆಯನ್ನು ತೆರೆಯುವುದರ ಮೂಲಕ ಅದರಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಮಾಡದೆ ಸರ್ಕಾರಕ್ಕೆ ಮೋಸ ಮಾಡಿ ಹಣ ಮಾಡುತ್ತಿದ್ದಾರೆ ಇಂತಹ ಸಂಸ್ಥೆ ಮತ್ತು ವ್ಯಕ್ತಿಗಳ ಮೇಲೆ ಜಿಲ್ಲಾಡಳಿತ ನಿಗಾವಹಿಸುವುದರ ಮೂಲಕ ಶಿಕ್ಷೆಗೆ ಗುರಿ ಪಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ಶ್ರೀಮತಿ ಸೌಭಾಗ್ಯಬಸವರಾಜನ್, ಜಿಲ್ಲಾಧಿಕಾರಿ ಶ್ರೀಮತಿ ಜ್ಯೋತ್ಸ್ನ, ಜಿ.ಪಂ.ಸಿಇಓ ರವಿಂದ್ರ ಅಪರ ಜಿಲ್ಲಾಧಿಕಾರಿ ರಾಘವೇಂದ್ರ ಭಾಗವಹಿಸಿದ್ದರು, ಇದೇ ಸಂದರ್ಭದಲ್ಲಿ ವಿಕಲಾಂಗರಾಗಿ ವಿಶಿಷ್ಟ ಸೇವೆಯನ್ನು ಮಾಡಿದವರನ್ನು ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.