ಬೆಂಗಳೂರು: ಕರ್ನಾಟಕ ರಾಜ್ಯ ವಾಸವಿ ವಿದ್ಯಾಸಂಸ್ಥೆಗಳ ಒಕ್ಕೊಟದ ಅದ್ಯಕ್ಷರಾಗಿ ಚಿತ್ರದುರ್ಗದ ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಪಿ.ಎಲ್..ಸುರೇಶ್ ರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಒಕ್ಕೊಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಿ.ಎಲ್.ಸುರೇಶ್ ರಾಜು ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇದೇ ವೇಳೆ ಗೌರವ ಅಧ್ಯಕ್ಷರಾಗಿ ಮಾನಂದಿ ಸುರೇಶ್, ಕಾರ್ಯದರ್ಶಿಯಾಗಿ ರಮೇಶ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಬಿ.ಎಲ್.ಶ್ಯಾಮಸುಂದರ್ ಅವರನ್ನು ಆಯ್ಕೆ ಮಾಡಲಾಯಿತು
ರಾಜ್ಯದಲ್ಲಿ ಒಟ್ಟು ೬೪ ಶಿಕ್ಷಣ ಸಂಸ್ಥೆಗಳು ಆರ್ಯವೈಶ್ಯ ಸಮಾಜದವತಿಯಿಂದ ನಡೆಯುತ್ತಿದ್ದು, ಈ ಎಲ್ಲಾ ಸಂಸ್ಥೆಗಳ ಅಭಿವೃದ್ದಿಗೆ ಶ್ರಮಿಸುವುದು, ಪ್ರತಿ ವರ್ಷಕ್ಕೊಮ್ಮೆ ಸಂಸ್ಥೆಗಳ ಶಿಕ್ಷಕರಿಗೆ ನುರಿತ ತಜ್ಞರಿಂದ ವಿಶೇಷ ಉಪನ್ಯಾಸ ಮತ್ತು ವಿಶೇಷ ತರಬೇತಿಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಅದಲ್ಲದೆ ಸಮಾಜದ ತೀರಾ ಬಡಕುಟುಂಬಗಳ ಮಕ್ಕಳ ಉನ್ನತ ಮಟ್ಟದ ಶೈಕ್ಷಣಿಕ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಸಮಾಜದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಸೈಟಿಗಳು ಅಥವಾ ಬ್ಯಾಂಕುಗಳ ಮೂಲಕ ಆರ್ಥಿಕ ನೆರವು ಕಲ್ಪಸಿಕೊಡಲು ಸಹ ನಿರ್ಣಯ ಕೈಗೊಳ್ಳಲಾಯಿತು
ವಾಸವಿ ಸಂಸ್ಥೆಯಲ್ಲಿ ಸನ್ಮಾನ;
ಕರ್ನಾಟಕ ರಾಜ್ಯ ವಾಸವಿ ವಿದ್ಯಾಸಂಸ್ಥೆಗಳ ಒಕ್ಕೋಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ.ಎಲ್.ಸುರೇಶ್ ರಾಜು ಹಾಗೂ ಚಿತ್ರದುರ್ಗ ಜಿಲ್ಲಾ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೊಟದ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ರಾಮಲಿಂಗಾಶ್ರೇಷ್ಠಿ ಅವರನ್ನು ಮಂಗಳವಾರದಂದು ವಾಸವಿ ವಿದ್ಯಾಸಂಸ್ಥೆವತಿಯಿಂದ ಸನ್ಮಾನಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ರಾಧಾಮಣಿ, ತೇಜಸ್ವನಿ,ಪಿ.ಎಂ.ಶೈಲಜಾ, ಸಂಸ್ಥೆಯ ವ್ಯವಸ್ಥಾಪಕ ಗೋಪಾಲಕೃಷ್ಣ, ನಗರಸಭೆ ಮಾಜಿ ಸದಸ್ಯ ರಾಜಕುಮಾರ್,ಯೋಗೇಶ್ ಅವರು ಹಾಜರಿದ್ದರು