ಚಳ್ಳಕೆರೆ: ಚಳ್ಳಕೆರೆ ನಗರದ ವಾಸವಿ ಮಹಲ್‌ನಲ್ಲಿ ಬುಧವಾರ ಗೌರಿ ಹಬ್ಬದ ಪ್ರಯುಕ್ತ ಲಲಿತಾ ಸಹಸ್ತ್ರನಾಮ ಪರ್ಯಾಣ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು.
ವಾಹಸವಿ ಮಹಿಳಾ ಮಂಡಳಿ, ವಾಸವಿ ವನಿತಾ ಮಂಡಳಿ, ಆರ್‍ಯವೈಶ್ಯ ಸಂಘ, ವಾಸವಿ ಸೌಹಾರ್ಧ ಪತ್ತಿನ ಸಹಕಾರಿ ಸಂಘ, ವಾಸವಿ ಸಮಿತಿ, ವಾಸವಿ ಶಿರಡಿ ಸಾಯಿಬಾಬಾ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಈ ಪೂಜೆ ಬುಧವಾರ ಮುಂಜಾನೆ ೫ ರಿಂದ ಪ್ರಾರಂಭವಾಗಿ ಗೌರಿಗೆ ವಿವಿಧ ರೀತಿಯ ಅಭಿಷೇಕಗಳನ್ನು ನಡೆಸಲಾಯಿತು. ಈ ಬಗ್ಗೆ ಮಾತನಾಡಿದ ವಾಸವಿ ವನಿತಾ ಮಂಡಳಿ ಕಾರ್ಯದರ್ಶಿ ಆಶಾಮಧು, ಪ್ರತಿವರ್ಷದಂತೆ ಈ ವರ್ಷವೂ ಈ ಭಾಗದ ಎಲ್ಲಾ ಮುತ್ಯೈದೆಯವರು ಸೇರಿ ಬಾಗಿನವನ್ನು ನೀಡಿ ಸರ್ವಕಾಲವೂ ಸುಮಂಗಳಲಿಯಾಗಿರುವಂತೆ ಹಾರೈಸಲಾಗುವುದು. ಹಿರಿಯರು, ತವರು ಮನೆಯ ಬಾಗಿನವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಆರ್‍ಯವೈಶ್ಯ ಸಂಘದ ಅಧ್ಯಕ್ಷ ಸಿ.ಎಸ್.ಪ್ರಸಾದ್, ವಾಹಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಸಂಧ್ಯಾವೆಂಟಕಚಲ, ವಾಸವಿ ವನಿತಾ ಮಂಡಳಿ ಅಧ್ಯಕ್ಷೆ ನಾಗಲಕ್ಷ್ಮಿ, ಕಾರ್ಯದರ್ಶಿ ಪದ್ಮ  ಜಾನಕಿ ಚಿದಾನಂದ, ಜ್ಯೋತಿ ಪ್ರಭಾಕರ್, ರಾಜೇಶ್ವರಿ ರಾಮಚಂದ್ರಪ್ಪ ಹಾಗೂ ಇನ್ನಿತರ ಸಂಘದ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.