ಚಿತ್ರದುರ್ಗ: ಚಿತ್ರದುರ್ಗ ನಗರದ ವಾಸವಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪೂಜೆಗಳಿಗೆ ಗುರುವಾರ ರಾತ್ರಿ ಚಾಲನೆ ನೀಡಲಾಯಿತು. ಡಿಸೆಂಬರ್ 7 ರವರೆಗೆ ಒಂದು ತಿಂಗಳ ಕಾಲ ಪ್ರತಿ ದಿನ ದೇವಾಲಯದಲ್ಲಿ ಹಮ್ಮಿಕೊಂಡಿರುವ ವಿವಿಧ ಧಾರ್ಮಿಕ ಕಾರ್ಯಗಳನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಆರ್ಯ ವೈಶ್ಯ ಸಂಘದ ಅಧ್ಯಕ್ಷ ಎಸ್. ಎನ್ ಕಾಶಿವಿಶ್ವನಾಥ ಶೆಟ್ಟಿ ಉದ್ಘಾಟಿಸಿದರು.

ಪ್ರತಿದಿನ ಅಮ್ಮನವರಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುವುದು, ಭೀಮಸಮದ್ರದ ಅಡಿಕೆ ತೋಟದಲ್ಲಿ ಧಾತ್ರಿ ಹೋಮ, ಗಾಂಧಿ ಜೀವನ ಚರಿತ್ರೆ ನಾಟಕ, ಗಿರಿಜಾ ಕಲ್ಯಾಣ, ಭಕ್ತಿ ಗೀತೆಗಳು, ಗಮಕ ಇತ್ಯಾದಿ ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತ್ಯ ಜಗಲಿಯ ಸಾರಥಿ ರಾ. ವೆಂಕಟೇಶ ಶೆಟ್ಟಿಯವರು ಸುದೀರ್ಘ ರಾತ್ರಿ ಇರುವ ಕಾರ್ತೀಕದ ಸಂದರ್ಭದಲ್ಲಿ ಜ್ಯೋತಿ ಬೆಳಗಿಸಿ ಬೆಳಕನ್ನು ಆಹ್ವಾನಿಸುವುದು ಅಂತರಂಗದ ಕತ್ತಲನ್ನು ತೊಡೆದು ಹಾಕಿ ಜ್ಞಾನವನ್ನು ತುಂಬಿಕೊಳ್ಳುವುದರ ಸಂಕೇತವಾಗಿದೆ ಎಂದರು. ಎಸ್.ಕೆ.ಪಿ ಸಹಕಾರಿಯ ಉಪಾಧ್ಯಕ್ಷ ಮುತ್ಯಾಲ್ ಪ್ರಾಣೇಶ್ ಅವರು ಬಲಿಪಾಢ್ಯಮಿಯ ಔಚಿತ್ಯವನ್ನು ವಿವರಿಸಿದರು. ಆರ್ರ್‍ಉವೈಶ್ಯ ಸಂಘದ ಕಾರ್ಯದರ್ಶಿ ವೈ ಗೋವಿಂದರಾಜಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಲ್ ಆರ್ ವೆಂಕಟೇಶ ಕುಮಾರ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.