ಚಿತ್ರದುರ್ಗ: ನಗರದ ವಾಸವಿ ದೇವಾಲಯದಲ್ಲಿ ಎಪ್ರಿಲ್ ೨೫ ರ ಬುಧವಾರ ಮಧ್ಯಾಹ್ನ ಕನ್ಯಕಾ ರಸ್ತೆಯ ನಿವಾಸಗಳಲ್ಲಿ ಜನಿಸಿದ ಅವಳಿ ಮಕ್ಕಳುಗಳನ್ನು ಸನ್ಮಾನಿಸಲಾಯಿತು. ರಸ್ತೆಗೆ ಕನ್ಯಕಾ ರಸ್ತೆ ಎಂದು ನಾಮಕರಣ ಮಾಡಿದ ನಂತರ ಜನಿಸಿದ ಆರು ಜನ ಅವಳಿ ಮಕ್ಕಳನ್ನು ಮತ್ತು ಅವರ ತಂದೆ ತಾಯಿಯರನ್ನು ಫಲ, ಪುಷ್ಪ ಹಾಗೂ ವಾಸವಿ ಮಾತೆಯ ಪ್ರಸಾದ ನೀಡಿ ಗೌರವಿಸಲಾಯಿತು.

ವಾಸವಿ ಭಜನಾ ಮಂಡಲಿ, ಶ್ರೀವಾರಿ ಭಜನಾ ಮಂಡಲಿ ಹಾಗೂ ಆರ್ಯವೈಶ್ಯ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್ ಕಾಶಿ ವಿಶ್ವನಾಥ ಶ್ರೇಷ್ಠಿಯವರು ದೇವಾಲಯದಲ್ಲಿ ನಡೆಯುವ ವಾಸವಿ ಜಯಂತಿ ಕಾರ್ಯಕ್ರಮದಲ್ಲಿ ಈ ಮಕ್ಕಳಿಗೆ ಸನ್ಮಾನವನ್ನು ನೀಡಲು ಸಂತಸವಾಗುತ್ತದೆ ಎಂದರು. ಭಜನಾ ಮಂಡಲಿಗಳ ಅಧ್ಯಕ್ಷೆ ಸತ್ಯಪ್ರಭಾ ವಸಂತುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಿ.ಎಲ್ ಸುರೇಶರಾಜ್, ರಾ.ವೆಂಕಟೇಶ ಶೆಟ್ಟಿ, ಪ್ರೊ ಟಿ.ವಿ ಸುರೇಶಗುಪ್ತ ಮಾತನಾಡಿದರು. ಎಲ್.ಆರ್ ವೆಂಕಟೇಶ ಕುಮಾರ್, ಜಲಜಾ ರಮೇಶ್, ಮಂಜಮ್ಮ ತಿಮ್ಮಶೆಟ್ಟಿ ಉಪಸ್ಥಿತರಿದ್ದರು.