ಮಂಡ್ಯ : ದೊಡ್ಡಗೌಡರು ಗ್ರೀನ್ ಸಿಗ್ನಲ್ ಕೊಟ್ಟಿರುವುದರಿಂದ ಲೋಕಸಭೆ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸಿದ್ದತೆ ನಡೆಸಲು ಮುಂದಾಗಿದ್ದಾರೆ. ಈ ಗಾಗಲೆ ಮಂಡ್ಯದಲ್ಲೇ ಮನೆ ಮಾಡುತ್ತೇನೆ ಎಂದು ಸಹ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದಲ್ಲೇ ಮಂಡ್ಯ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಮಂಡ್ಯದಲ್ಲೇ ಮನೆಯನ್ನೂ ಮಾಡುತ್ತೇನೆ. ಕಚೇರಿಯನ್ನೂ ತೆರೆಯುತ್ತೇನೆ, ಕಾದು ನೋಡಿ ಎನ್ನುವ ಮೂಲಕ ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಖಚಿತ ಪಡಿಸಿದ್ದಾರೆ.

ಮಂಡ್ಯದಲ್ಲಿ ಇಂದಿನಿಂದ ನನ್ನ ಸೇವೆ ಆರಂಭವಾಗಿದೆ. ನಮ್ಮ ಪಕ್ಷದ ವರಿಷ್ಠರು ನನ್ನ ಹೆಸರು ಘೋಷಿಸಿದ್ದಕ್ಕೆ ಅಭಾರಿಯಾಗಿದ್ದೀನಿ. ಜಿಲ್ಲೆಯ ಜನರ ಭಾವನೆಗಳಿಗೆ ಅನುಗುಣವಾಗಿ ನನ್ನ ಹೆಸರು ಘೋಷಣೆ ಮಾಡಿದ್ದಾರೆ. ಹೀಗಾಗಿ ಇಂದಿನಿಂದ ಮಂಡ್ಯದಲ್ಲಿ ನನ್ನ ಸೇವೆ ಶುರುವಾಗಿದೆ ಎಂದರು.