ಚಿತ್ರದುರ್ಗ: ಲೋಕಸಭಾ ಚುನಾವಣೆ ನಂತರ ಸಮಿಶ್ರ ಸರಕಾರ ಪತನ ಎಂದು ಬಿಜೆಪಿ ಮುಖಂಡ ಗೋವಿಂದಾ ಕಾರಜೋಳ ಭವಿಷ್ಯ ಹೇಳಿದರು.

ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗೆ ನಮ್ಮ‌ಮೊದಲ ಆದ್ಯತೆ ಎಂದರು.

ದಾವಣಗೆರೆ ಹಾಗೂ ತುಮಕೂರು ನೇರ ರೈಲು ಮಾರ್ಗದ ಕೆಲಸಕ್ಕೆ ನಾವು ಬದ್ದರಾಗಿದ್ದೇವೆ. ನಮ್ಮ ಪಕ್ಷದ ಆನೇಕಲ್ ನಾರಾಯಣ ಸ್ವಾಮಿಯವರನ್ನು ಗೆಲ್ಲಿಸಿದರೆ ಈ ಭಾಗದ ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂದಾಗುತ್ತಾರೆ ‌ಎಂದರು.