ಚಿತ್ರದುರ್ಗ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಾಳೆ ಜರುಗಲಿರುವ ರಾಮಮಂದಿರ ಭೂಮಿಪೂಜೆ ಹಾಗೂ ಶಿಲಾನ್ಯಾಸ ಸಮಾರಂಭಕ್ಕೆ ಪಾಲ್ಗೊಳ್ಳಲಿರುವ ಮಾದಾರ ಚನ್ನಯ್ಯಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿಯವರನ್ನು ವಿಶ್ವಹಿಂದುಪರಿಷತ್ ಹಾಗೂ ಭಜರಂಗದಳದಿಂದ ಆನೆಬಾಗಿಲು ಸಮೀಪವಿರುವ ಶ್ರೀರಾಮ ದೇವಸ್ಥಾನದಿಂದ ಕಳಿಸಿಕೊಡಲಾಯಿತು.

ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಸೈಟ್‌ಬಾಬಣ್ಣ ರಾಮಮಂದಿರ ಭೂಮಿಪೂಜೆ ಹಾಗೂ ಶಿಲಾನ್ಯಾಸಕ್ಕೆ ತೆರಳುತ್ತಿರುವ ಮಾದಾರ ಚನ್ನಯ್ಯಸ್ವಾಮೀಜಿಗೆ ವಿಮಾನದ ಟಿಕೇಟ್ ನೀಡುವ ಮೂಲಕ ಪ್ರಯಾಣ ಸುಖಕರವಾಗಿರಲೆಂದು ಹಾರೈಸಿದರು.
ಆನೆಬಾಗಿಲು ಸಮೀಪವಿರುವ ಮೂರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಂಗಳವಾರ ಸಂಜೆ ಬೆಂಗಳೂರಿನಿಂದ ವಿಮಾನದ ಮೂಲಕ ಅಯೋಧ್ಯೆಗೆ ತೆರಳಿದರು.

ವಿಶ್ವಹಿಂದು ಪರಿಷತ್ ನಗರಾಧ್ಯಕ್ಷ ಶ್ರೀನಿವಾಸ್, ಭದ್ರಿನಾಥ್, ಪ್ರಭಂಜನ್, ತಿಪ್ಪೇಸ್ವಾಮಿ, ವಿಠಲ್, ಓಂಕಾರ್, ಭಾನುಮೂರ್ತಿ, ರುದ್ರೇಶ್, ಅಶೋಕ್, ಶ್ಯಾಮಲಶಿವಪ್ರಕಾಶ್ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.