ಚಿತ್ರದುರ್ಗ: ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ವೈ.ತಿಪ್ಪೇಸ್ವಾಮಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ಸಮಿತಿ ರಚನೆ ಕುರಿತು ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಉಪಾಧ್ಯಕ್ಷ ಸಿ.ತಿಪ್ಪೇಸ್ವಾಮಿ ಗುಡಿಹಳ್ಳಿರವರು ಛಲವಾದಿ ಸಮಾಜದ ಎಲ್ಲರ ಸಹಮತ ಪಡೆದು ವೈ.ತಿಪ್ಪೇಸ್ವಾಮಿರವರನ್ನು ಜಿಲ್ಲಾಧ್ಯಕ್ಷರನ್ನಾಗಿ ಘೋಷಿಸಿದರು.
ಕಾರ್ಯಾಧ್ಯಕ್ಷರಾಗಿ ಧನಂಜಯ, ಉಪಾಧ್ಯಕ್ಷರುಗಳಾಗಿ ಪಿ.ಹನುಮಂತಪ್ಪ, ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ನೆಲ್ಲಿಕಟ್ಟೆ, ಕಾರ್ಯದರ್ಶಿಯಾಗಿ ಶಿವರಾಜ್, ಜಂಟಿ ಕಾರ್ಯದರ್ಶಿಯಾಗಿ ಪಿ.ಸಿ.ತಿಪ್ಪೇಸ್ವಾಮಿ, ಖಜಾಂಚಿಯಾಗಿ ನಿರಂಜನ್, ಸಹ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಇವರುಗಳನ್ನು ನೇಮಕ ಮಾಡಲಾಯಿತು.
ಜಿಲ್ಲಾ ಸಮಿತಿ ರಚನೆ ನಂತರ ಮಾತನಾಡಿದ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಉಪಾಧ್ಯಕ್ಷ ಸಿ.ತಿಪ್ಪೇಸ್ವಾಮಿ ಗುಡಿಹಳ್ಳಿ ಛಲವಾದಿ ಜನಾಂಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬಲಿಷ್ಟವಾಗಬೇಕಾಗಿರುವುದರಿಂದ ಸಂಘಟನೆ ಮುಖ್ಯ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಎಲ್ಲರೂ ಒಂದಾಗಿ ಜನಾಂಗದ ಅಭಿವೃದ್ದಿಗೆ ಶ್ರಮಿಸಿ ಎಂದು ತಿಳಿಸಿದರು.
ಕೋಡೇಶ್, ಜಗಳೂರು ತಿಪ್ಪೇಸ್ವಾಮಿ, ಅಣ್ಣಪ್ಪಸ್ವಾಮಿ, ಭೂತೇಶ್, ನಾಗರಾಜ್ ನೆಲ್ಲಿಕಟ್ಟೆ, ಏಕಾಂತ್, ದಯಾನಂದ್, ಸಜ್ಜನಕೆರೆ ಗುರುಮೂರ್ತಿ ಸೇರಿದಂತೆ ಛಲವಾದಿ ಜನಾಂಗದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.