ಚಿತ್ರದುರ್ಗ: ಛಲವಾದಿ ಜನಾಂಗದ ಸಂಘಟನೆ ಕುರಿತು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದಿಂದ ಸೋಮವಾರ ಪೂರ್ವಭಾವಿ ಸಭೆ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಸಿ.ತಿಪ್ಪೇಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಹಿಂದುಳಿದಿರುವ ಛಲವಾದಿ ಸಮಾಜವನ್ನು ಸಂಘಟಿಸುವುದು ಅತ್ಯವಶ್ಯಕವಾಗಿದೆ. ಅದಕ್ಕಾಗಿ ರಾಜ್ಯಾದ್ಯಂತ ಸುತ್ತಾಡಿ ಛಲವಾದಿ ಜನಾಂಗದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸಮಿತಿ ರಚಿಸುವ ಕುರಿತು ಜೂ.೨೩ ರಂದು ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ ೧೦-೩೦ ಕ್ಕೆ ಸಭೆ ಕರೆಯಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನ ಛಲವಾದಿ ಬಂಧುಗಳು ತಪ್ಪದೆ ಸಭೆಗೆ ಆಗಮಿಸುವಂತೆ ಸಿ.ತಿಪ್ಪೇಸ್ವಾಮಿ ವಿನಂತಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು ಹಾಗೂ ಛಲವಾದಿ ಸಮಾಜದ ಮುಖಂಡರಾದ ವೈ.ತಿಪ್ಪೇಸ್ವಾಮಿ, ಹೆಚ್.ಅಣ್ಣಪ್ಪಸ್ವಾಮಿ, ಹಾಲೇಶಪ್ಪ, ಚನ್ನಬಸಪ್ಪ, ದಾವಣಗೆರೆ ಎಸ್.ಹೆಚ್.ಗುರುಮೂರ್ತಿ, ಬಸವರಾಜು, ತಾ.ಪಂ.ಮಾಜಿ ಸದಸ್ಯ ಹೆಚ್.ನಿಜಲಿಂಗಪ್ಪ, ಹನುಮಂತಪ್ಪ, ದಯಾನಂದ್, ರವಿ, ಬಸವರಾಜಪ್ಪ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.