ಬೆಂಗಳೂರು: ರಾಜಕಾರಣ ಅಂದ ಮೇಲೆ ಎಲ್ಲವೂ ಇದ್ದಿದ್ದೆ. ನಾವು ಇನ್ನೂ ದೊಡ್ಡವರಿಗೆ ಕೈ ಹಾಕಿದ್ದೇವೆ. ದೊಡ್ಡವರ ಜೊತೆಗೆ ಮಾತುಕತೆ ನಡೆದಿದೆ. ಅವೆಲ್ಲವೂ ಬಹಿರಂಗವಾಗಿಲ್ಲ. ರಾಜಕಾರಣದಲ್ಲಿ ಯಾರೂ ಸಾಚಾಗಳಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ. 

ಯಡಿಯೂರಪ್ಪನವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ, ಯಡಿಯೂರಪ್ಪನವರ ರಾಜೀನಾಮೆ ಕೇಳಲು ಕಾಂಗ್ರೆಸ್​-ಜೆಡಿಎಸ್​ ನಾಯಕರಿಗಲ್ಲದೆ ಬೇರಾರಿಗೂ ನೈತಿಕತೆ ಇಲ್ಲ. ಅವರು ನೈತಿಕತೆಯ ಉತ್ತುಂಗದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.