ಬೆಂಗಳೂರು ಟೈಮ್ಸ್ ಹಮ್ಮಿಕೊಂಡಿರುವ #FlirtWithYourCity ಅಭಿಯಾನದಲ್ಲಿ ಕನ್ನಡದ ಖ್ಯಾತ ನಟಿ ಶ್ರದ್ಧಾ ಶ್ರೀನಾಥ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸುಮಾರು 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಶ್ರದ್ಧಾ, “ನಾನು ಸೈನಿಕ ಕುಟುಂಬದವಳಾದ ಕಾರಣ ಒಂದು ಸ್ಥಳದಿಂದ ಇನ್ನೊಂದೆಡೆಗೆ ವರ್ಗಾವಣೆ ಆಗುತ್ತಲೇ ಇರುತ್ತೇನೆ. ನಾನು ಬೆಂಗಳೂರಿಗೆ ಬಂದ ಬಳಿಕವೇ ನಾನು ಹಲವಾರು ವಿಷಯಗಳನ್ನು ಮಿಸ್ ಮಾಡಿಕೊಂಡೆ ಎಂದು ನನಗನಿಸಿದ್ದು, ಸದ್ಯ ನಾನು ನನ್ನನ್ನು ಬೆಂಗಳೂರಿಗಳು ಎಂದು ಕರೆಸಿಕೊಳ್ಳುತ್ತೇನೆ ಎಂದರು.

ಬಳಿಕ ಮಾತನಾಡಿದ ಶ್ರದ್ಧಾ, ಕಲಾವಿದೆಯಾಗಿ ನನ್ನ ಮೇಲೆ ಬೆಂಗಳೂರು ತುಂಬಾನೇ ಪ್ರಭಾವ ಬೀರಿದೆ. ನಾನಾನು ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತ ಎರಡನ್ನೂ ಇಷ್ಟಪಡುತ್ತೇನೆ. ಹೆಚ್ಚಾಗಿ ನಾನು ರಂಗಭೂಮಿಯನ್ನು ಇಷ್ಟಪಡಲು ಪ್ರಾರಂಭಿಸಿದೆ. ಒರ್ವ ವ್ಯಕ್ತಿಯು ತನ್ನನ್ನು ಕಂಡುಕೊಳ್ಳಬೇಕೆಂದರೆ ರಂಗಭೂಮಿಯು ಸಹಕಾರಿಯಾಗಿದೆ ಎನ್ನುತ್ತಾರೆ ಶ್ರದ್ದಾ.

ಬೆಂಗಳೂರಿನ ಕುರಿತು ತನ್ನಲ್ಲಿರುವ ಒಲವಿನ ಕುರಿತು ಮಾತನಾಡುವ ಶ್ರದ್ದಾ, ಯಾರಾದರೂ ಬೆಂಗಳೂರಿನ ಕುರಿತು ಏನಾದರೂ ಕೆಟ್ಟದ್ದನ್ನು ಹೇಳಿದ ಕೂಡಲೇ ತಮ್ಮ ನಗರದ ರಕ್ಷಣೆಗೆ ನಿಲ್ಲುತ್ತಾರೆ. ಹಲವಾರು ಪ್ರದೇಶಗಳಿಗೆ ಶ್ರದ್ಧಾ ತೆರಳುತ್ತಿದ್ದರೂ ಕೊನೆಗೆ ಬೆಂಗಳೂರಿಗೆ ಬಂದು ತಲುಪುತ್ತಾರೆ. ಬೆಂಗಳೂರು ನಗರವು ಅಭಿವೃದ್ಧಿ, ಬದಲಾವಣೆಗಳನ್ನು ಕಾಣುತ್ತಿದ್ದರೂ, ನಗರದಲ್ಲಿ ನಡೆಯುವ ಯಾವುದೇ ಕಾರ್ಯವನ್ನೂ ಮಿಸ್ ಮಾಡಲು ಶ್ರದ್ಧಾ ತಯಾರಿಲ್ಲ.  ಶ್ರದ್ಧಾ ಬೆಂಗಳೂರನ್ನು ಪ್ರೀತಿಸುತ್ತಾರೆ.