ಚಿತ್ರದುರ್ಗ : ಯುವ ಜನತೆ ದೇಶದ ಆಸ್ತಿ, ದೇಶದ ಮುಂದಿನ ಭವಿಷ್ಯ ನಿಮ್ಮ ಕೈಯಲ್ಲಿದೆ, ದೇಶವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವಂತೆ ವಿದ್ಯಾರ್ಥಿಗಳಿಗೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕರೆ ನೀಡಿದ್ದಾರೆ.
ಚಿತ್ರದುರ್ಗ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್. ಘಟಕ ಉದ್ಘಾಟನೆ ಮತ್ತು ಸೈಕಲ್ ವಿತರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆಗೆ ಸರಿಯಾದ ರೀತಿಯ ಪೋತ್ಸಾಹ ಅಗತ್ಯವಾಗಿದೆ. ಸಾಧನೆ ಸಾಧಕರ ಸೋತ್ತೇ ಹೋರೆತು ಸೋಮಾರಿಗಳ ಸೋತ್ತಾಗುವುದಿಲ್ಲ, ಸಾಧನೆಗೆ ಜಾತಿ,ಧರ್ಮ,ಮತಗಳನ್ನು ಮೀರಿದ್ದು, ಸಾಧನೆಯಾಗಿದೆ. ಸಾಧನೆ ಮಾಡಿದವನಿಗೆ ಸಮಾಜದಲ್ಲಿ ಉತ್ತಮ ರೀತಿಯಾದ ಮನ್ನಣೆ ದೊರೆಯುತ್ತದೆ. ಇದನ್ನು ಪಡೆಯಲು ಶಿಕ್ಷಣವನ್ನು ಪಡೆಯಬೇಕಿದೆ ಎಂದು ಹೇಳಿದರು.
ಇದುವರೆವಿಗೂ ದೇಶದಲ್ಲಿ ಉತ್ತಮ ರೀತಿಯ ಸಾಧನೆಯನ್ನು ಮಾಡಿದ ವ್ಯಕ್ತಿಗಳು ಬಹುತೇಕ ವ್ಯಕ್ತಿಗಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುವುದರ ಮೂಲಕ ದೇಶದ ಮಹಾನ್ ವ್ಯಕ್ತಿಗಳಾಗಿ ಬೆಳದಿದ್ದಾರೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳಿರಿಮೆಯನ್ನು ಮೊದಲು ತೊರೆಯಬೇಕಿದೆ. ಇದು ನಿಮ್ಮ ಮನಸ್ಸಿನಲ್ಲಿ ಇದ್ದಷ್ಟು ದಿನ ಯಾವುದೇ ರೀತಿಯ ಪ್ರಗತಿಯನ್ನು ಸಾಧನೆ ಮಾಡಲು ಸಾಧ್ಯವಿಲ್ಲ ಎಂದ ಅವರು,ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ರೀತಿಯ ಒತ್ತನ್ನು ನೀಡುತ್ತಿದೆ. ಉಚಿತ ಪಠ್ಯ ಪುಸ್ತಕ, ಮಧ್ಯಾಹ್ನ ಬಿಸಿಯೂಟ, ದೂರದಿಂದ ಬರುವಂತಹರಿಗೆ ಸೈಕಲ್, ಸ್ಕಾಲರ್‌ಶಿಪ್, ಹಾಸ್ಟಲ್, ಸೇರಿದಂತೆ ಇತರೆ ಸೌಲಭ್ಯ ನೀಡುತ್ತಿದೆ ಅದರ ಪ್ರಯೋಜನ ಪಡೆಯುವುದರ ಮೂಲಕ ದೇಶದ ಸಮಗ್ರವಾದ ಅಭೀವೃದ್ದಿಯನ್ನು ಮಾಡುವಂತೆ ನಾರಾಯಣಸ್ವಾಮಿ ಕರೆ ನೀಡಿದರು.
ದೇಶದ ಮುಂದಿನ ಭವಿಷ್ಯ ನಿಮ್ಮಗಳ ಕೈಯಲ್ಲಿದೆ. ಸವಾಲ್‌ಗಳನ್ನು ಸ್ವೀಕಾರ ಮಾಡುವುದರ ಮೂಲಕ ಅದನ್ನು ಎದುರಿಸುವ ಕಾರ್ಯವನ್ನು ಮಾಡಿ,  ಸರ್ಕಾರಿ ಶಾಲೆಗಳೆಂದರೆ ಶಕ್ತಿ ಕೇಂದ್ರಗಳಿದ್ದಂತೆ ಇಲ್ಲಿ ದೊರೆಯುವ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ, ಪೋಷಕರು ನಿಮಗೆ ಶಾಲೆಗೆ ಕಳುಹಿಸುವ ಬಗ್ಗೆ ನೆನಪು ಮಾಡಿಕೊಳ್ಳಿ ಅವರ ಆಸೆಯನ್ನು ನಿರಾಸೆ ಮಾಡಬೇಡಿ, ೨೦೨೦ರ ವೇಳೆಗೆ ಭಾರತ ಯುವ ಜನತೆಯ ಕೈಯಲ್ಲಿ ಇರುತ್ತದೆ ಅದಕ್ಕೆ ಈಗಿನಿಂದಲೇ ಸಿದ್ದರಾಗುವಂತೆ ತಿಳಿ ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಜಯಮ್ಮ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ನಾಗಮಣಿ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಚಾರ್ಯರಾಧ ಶ್ರೀಮತಿ ತಾರಿಣಿ ಶುಭದಾಯಿನಿ, ಕಾಲೇಜು ಅಭೀವೃದ್ದಿ ಸಮತಿಯ ಸದಸ್ಯರಾದ ಪ್ರಸನ್ನ ಕುಮಾರ್, ಪ್ರೌಢಶಾಲಾ ಅಭೀವೃದ್ದಿ ಮಂಡಳಿಯ ಸದಸ್ಯರಾದ ನಾಗಶ್ರೀ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ಅಧ್ಯಕ್ಷತೆವಹಿಸಿದ್ದರು. ಇದೇ ಸಂದರ್ಭದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.