ಚಿತ್ರದುರ್ಗ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡಿರುವ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಲೆಂದು ಬಿಜೆಪಿ.ಮಹಿಳಾ ಮೋರ್ಚದಿಂದ ಆನೆಬಾಗಿಲು ಸಮೀಪವಿರುವ ಗಣೇಶ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿ ನಂತರ ಸಿಹಿ ವಿತರಿಸಿ ಸಂಭ್ರಮ ಆಚರಿಸಲಾಯಿತು.

ಬಿಜೆಪಿ.ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶ್ಯಾಮಲಶಿವಪ್ರಕಾಶ್ ಮಾತನಾಡಿ ರಾಜ್ಯದಲ್ಲಿ ಕಳೆದ ಒಂದುವರೆ ವರ್ಷದಿಂದ ಕಾಂಗ್ರೆಸ್ ಮತ್ತು ಜೆಡಿಎಸ್. ಮೈತ್ರಿ ಪಕ್ಷಗಳು ರಾಜ್ಯದ ಅಭಿವೃದ್ದಿಯನ್ನು ಕಡೆಗಣಿಸಿ ಅಧಿಕಾರಕ್ಕಾಗಿ ಕಚ್ಚಾಡಿದ್ದರಿಂದ ತಮ್ಮಷ್ಟಕ್ಕೆ ತಾವೆ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಬಿಜೆಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮತ್ತೊಮ್ಮೆ ರಾಜ್ಯದ

ಮುಖ್ಯಮಂತ್ರಿಯಾಗುತ್ತಿರುವುದರಿಂದ ನಮ್ಮ ಆಸೆ ಈಡೇರಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಂದಿನ ನಾಲ್ಕು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪನವರು ಜನಪರ ಆಡಳಿತ ನೀಡಲಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವರ್ಗದ ಅಭಿವೃದ್ದಿಗೆ ಶ್ರಮಿಸುವ ಮೂಲಕ ಉತ್ತಮ ಆಡಳಿತ ನೀಡುವರು. ರಾಜ್ಯದಲ್ಲಿ ಬಿಜೆಪಿ.ಮತ್ತು ಅಧಿಕಾರಕ್ಕೆ ಬರುತ್ತಿರುವುದು ನಮಗೆ ಅತ್ಯಂತ ಸಂತೋಷವಾಗಿದೆ ಎಂದರು.

ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್ , ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‌ಬೇದ್ರೆ, ಖಜಾಂಚಿ ನರೇಂದ್ರ, ಉಪಾಧ್ಯಕ್ಷ ಶಿವಣ್ಣಾಚಾರ್, ರೈತ ಮೋರ್ಚ ಜಿಲ್ಲಾಧ್ಯಕ್ಷ ಡಿ.ರಮೇಶ್, ಎಂ.ಎ.ಸೇತೂರಾಂ, ಒ.ಬಿ.ಸಿ.ಮೋರ್ಚದ ಸಂಪತ್‌ಕುಮಾರ್, ನಗರ ಕಾರ್ಯದರ್ಶಿ ಶಂಭು, ಮಕ್ಸೂದ್, ರೇಖ, ವೀಣ, ಶೈಲಜಾರೆಡ್ಡಿ, ಬಸಮ್ಮ, ಚಂದ್ರಿಕ ಲೋಕನಾಥ್, ಕಾಂಚನ, ಪದ್ಮ, ಶಾರದಮ್ಮ, ವಿಜಯಲಕ್ಷ್ಮಿ, ಅನ್ನಪೂರ್ಣ, ಶಾಂತಮ್ಮ, ರೀನ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.