ಚಿತ್ರದುರ್ಗ: ಜಿಲ್ಲೆಗೆ ಎಲ್.ಇ.ಡಿ. ಬಲ್ಪ್ ಕಾರ್ಖಾನೆ ಸ್ಥಾಪಿಸಲು ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿಸಲು ಮಾಡಿರುವ ಯೋಜನೆ ಸ್ವಾಗತಾರ್ಹ ಹಾಗೂ ಜಿಲ್ಲೇಯ ಜನತೆಗೆ ಸಂತಸದ ವಿಷಯವೇ ಸರಿ ಆದರೆ ಈ ಯೋಜನೆಯನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹಿಂದುಳಿದ ಪ್ರದೇಶವಾದ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಸ್ಥಾಪಿಸಿದರೆ ಇಲ್ಲಿನ ಜನರ ಜೀವನ ಹಸನಗೊಳ್ಳತ್ತದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಜಿ.ಹನುಮಂತಪ್ಪ ಒತ್ತಾಯಿಸಿದ್ದಾರೆ.
ಈ ಪ್ರದೇಶ ಅತೀ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು ಉದ್ಯೋಗ ಅರಸಿ ಬೇರೆ ಊರುಗಳಿಗೆ ಹೋಗುವ ಅನಿವಾರ್ಯತೆಕಾಡುತ್ತದೆ ಇದರಿಂದಾಗಿ ಸ್ಥಳೀಯವಾಗಿ ಉದ್ಯೋಗ ಬಯಸುವ ವಿದ್ಯಾವಂತ ಯುವಕ-ಯುವತಿ ದೂರದ ಊರುಗಳಿಗೆ ಹೊಗಲಾಗದೆ ಸ್ಥಳಿಯಗಾಗಿ ಉದ್ಯೋಗ ಹುಡುಕುತ್ತಿರುವ ಎಷ್ಟು ಜನಸಾಮಾನ್ಯರಿಗೆ ಸ್ಥಳಿಯವಾಗಿ ಉದ್ಯೋಗದ ಜೊತಗೆ ಮನೆಯಲ್ಲಿನ ವಯಸ್ಕರರನ್ನು ಪೋಷಣೆಮಾಡುವ ಜವಬ್ದಾರಿಯು ಸುಗಮವಾಗುವುದರ ಜೊತೆಗೆ ಸಾಧ್ಯವಾದ ಮಟ್ಟಿಗೆ ಸ್ಥಳಿಯ ನಿರುದ್ಯೋಗ ಸಮಸ್ಯೆ ದೂರವಾಗಬಹುದೆಂದು ಈ ಯೋಜನೆಯನ್ನು ಮೊಳಕಾಲ್ಮೂರು ತಾಲ್ಲೂಕಿನಲ್ಲಿಯೇ ಸ್ಥಾಪಿಸಲು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.