ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರಿನಲ್ಲಿ ಸೆಪ್ಟೆಂಬರ್ 15 ರಂದು 24.4 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.

ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯ ರಾಯಾಪುರ 16 ಮಿ.ಮೀ, ಬಿಜಿಕೆರೆ 11, ರಾಂಪುರ 19.3, ದೇವಸಮುದ್ರ 18 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ತಳಕಿನಲ್ಲಿ 1.8. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಮಾಡದಕರೆ 4. ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆಯಲ್ಲಿ 2.2. ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-1ರಲ್ಲಿ 4.2, ಚಿತ್ರದುರ್ಗ-2ರಲ್ಲಿ 1.6, ಹಿರೇಗುಂಟನೂರು 5.2, ಸಿರಿಗೆರೆ 12 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.