ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗದಲ್ಲಿ ಮೇ 7 ರಂದು 31.2 ಮಿ.ಮೀ ನಷ್ಟು ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ. ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ರಾಮಗಿರಿ 12.4, ಚಿಕ್ಕಜಾಜೂರು 3.2, ಹೆಚ್.ಡಿ.ಪುರದಲ್ಲಿ 4.2 ಮಿ.ಮೀ ನಷ್ಟು ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 6.2, ಪರಶುರಾಂಪುರ 8.2, ಡಿ.ಮರಿಕುಂಟೆ 6.4, ತಳಕು 29.4 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ 1ರಲ್ಲಿ 7.4, ಚಿತ್ರದುರ್ಗ 2ರಲ್ಲಿ 7.4, ಹಿರೇಗುಂಟನೂರು 2.0, ತುರುವನೂರು 2.4, ಸಿರಿಗೆರೆ 9.4, ಐನಹಳ್ಳಿ 17.6. ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 3.4, ಬಬ್ಬೂರು 1.4, ಇಕ್ಕನೂರು 10.2, ಈಶ್ವರಗೆರೆ 2.1. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 28.4, ಬಾಗೂರು 17, ಮತ್ತೋಡು 12, ಶ್ರೀರಾಂಪುರ 18.2, ಮಾಡದಕೆರೆ 14 ಮಿ.ಮೀ ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.