ಚಿತ್ರದುರ್ಗ: ಕೋವಿಡ್-19 ಲಾಕ್‍ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿರುವ 2019-20 ಸಾಲಿನಲ್ಲಿ ಮುಸುಕಿನ ಜೋಳ ಬೆಳೆದ ಬೆಳೆಗಾರರಿಗೆ 5000 ರೂ. ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮಾಡಲು ರೈತರು ಕೆ.ಕಿಸಾನ್‍ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೋವಿಡ್ 19 ಲಾಕ್‍ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿರುವ 2019-20 ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದ ರೈತರಿಗೆ 5 ಸಾವಿರ ರೂ. ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮಾಡಲು ಸರ್ಕಾರ ಆದೇಶಿಸಿದ್ದು, ರೈತರು ಕೆ-ಕಿಸಾನ್ (ಎಫ್‍ಐಡಿ) ತಂತ್ರಾಂಶದಲ್ಲಿ ನೊಂದಣಿ ಮಾಡಿಕೊಳ್ಳಬೇಕಿದೆ.

ಜಿಲ್ಲೆಯಲ್ಲಿ ಒಟ್ಟು ಕೆ-ಕಿಸಾನ್‍ನಲ್ಲಿ ಇದುವರೆಗೂ 44185 ರೈತರು ನೋಂದಣಿ ಮಾಡಿಕೊಂಡಿಲ್ಲ.  ರೈತರ ಹೆಸರು ಬೆಳೆ ಸಮೀಕ್ಷೆಯ ಪಟ್ಟಿಯಲ್ಲಿ ಲಭ್ಯವಿದ್ದು, ಕೆ.ಕಿಸಾನ್ ತಂತ್ರಾಂಶದಲ್ಲಿ ಲಭ್ಯವಿಲ್ಲದಿದ್ದಲ್ಲಿ, ಪಹಣಿ, ಆಧಾರ್ ಕಾರ್ಡ್ ಪ್ರತಿ, ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು  ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ, ಸಾಮಾನ್ಯ ಸೇವಾ ಕೇಂದ್ರ (ಸಿಎಸ್‍ಸಿ)  ಎಫ್‍ಐಡಿ ನೋಂದಣಿ ಮಾಡಿಸಿ ಯೋಜನೆ ನೆರವು ಪಡೆದುಕೊಳ್ಳಬೇಕು.  ಬೆಳೆ ಸಮೀಕ್ಷೆಯನ್ವಯ 2019-20 ನೇ ಸಾಲಿನಲ್ಲಿ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳ ಬೆಳೆದ ರೈತರ ಪಟ್ಟಿಯನ್ನು ಗ್ರಾಮ ಪಂಚಾಯತ್, ರೈತ ಸಂಪರ್ಕ ಕೇಂದ್ರ, ತಾಲ್ಲೂಕು ಕಚೇರಿಯ ನಾಮಫಲಕದಲ್ಲಿ ಪ್ರಕಟಿಸಲಾಗಿದೆ.

ಕೆ.ಕಿಸಾನ್‍ನಲ್ಲಿ ನೋಂದಣಿ ಬಾಕಿ ಇರುವ ವಿವರ ಚಿತ್ರದುರ್ಗ ತಾಲ್ಲೂಕಿನಲ್ಲಿ 14925 ರೈತರು, ಹೊಳಲ್ಕೆರೆ 22378, ಹೊಸದುರ್ಗ 3589, ಚಳ್ಳಕೆರೆ 2095, ಹಿರಿಯೂರು 774, ಮೊಳಕಾಲ್ಮೂರು 424 ರೈತರು ಕೆ-ಕಿಸಾನ್‍ನಲ್ಲಿ ನೊಂದಣಿ ಮಾಡಿಸುವುದು ಬಾಕಿ ಇದೆ.

ಜಂಟಿ ಖಾತೆದಾರರ ದೃಢಿಕರಣ :  ಜಿಲ್ಲೆಯಲ್ಲಿ 2701 ಜಂಟಿ ಖಾತೆದಾರರ ನೋಂದಣಿ ಬಾಕಿ ಇದ್ದು, ಚಿತ್ರದುರ್ಗ ತಾಲ್ಲೂಕು 1154, ಹೊಳಲ್ಕೆರೆ 1368, ಹೊಸದುರ್ಗ 10, ಚಳ್ಳಕೆರೆ 37, ಹಿರಿಯೂರು 37, ಮೊಳಕಾಲ್ಮೂರು 35 ಜಂಟಿ ಖಾತೆದಾರರ ದೃಢೀಕರಣ ಬಾಕಿ ಇದೆ.  ರೈತರು ಜಂಟಿ ಖಾತೆದಾರರಾಗಿದ್ದಲ್ಲಿ ಇತರೆ ಖಾತೆದಾರರಿಂದ ಒಪ್ಪಿಗೆ ಪತ್ರ ಪಡೆದು, ನೋಟರಿಯವರಿಂದ ದೃಢೀಕರಿಸಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಗಳಲ್ಲಿ  ಎಫ್‍ಐಡಿ  ನೋಂದಣಿ ಮಾಡಿಸಿ, ಈ ಯೋಜನೆ ಸದುಪಯೋಗ ಪಡೆಯಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.