ಚಿತ್ರದುರ್ಗ: ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಆದರ್ಶಗಳನ್ನು ಚಾಚೂ ತಪ್ಪದೆ ಪಾಲಿಸುತ್ತ ಆಧುನಿಕ ಯುಗದ ಬಸವಣ್ಣ ಎಂದೆ ಹೆಸರುವಾಸಿಯಾಗಿರುವ ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಶರಣರ ಆರೋಗ್ಯ ಸುಧಾರಿಸಿ ಬೇಗನೆ ಗುಣಮುಖರಾಗಲಿ ಎಂದು ದಾವಣಗೆರೆ ಯಾದವ ಮಹಾಸಭಾ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ನಿನ್ನೆ ಮುರುಘಾಮಠದಲ್ಲಿ ಶರಣರನ್ನು ಭೇಟಿಯಾಗಿ ಹಾರೈಸಿದರು.

ಆರೋಗ್ಯದಲ್ಲಿ ಏರುಪೇರಾಗಿ ವಿಶ್ರಾಂತಿ ಪಡೆಯುತ್ತಿರುವ ಮುರುಘಾಶರಣರನ್ನು ಭೇಟಿಯಾದ ಬಾಡದ ಆನಂದರಾಜ್ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ನೀಡಬೇಕೆಂಬ ಉದ್ದೇಶವಿಟ್ಟುಕೊಂಡು ಅನ್ನದಾಸೋಹ ಮತ್ತು ಶಿಕ್ಷಣ ದಾಸೋಹದ ಮೂಲಕ ಮೌನಕ್ರಾಂತಿ ಮಾಡುತ್ತಿರುವ ಡಾ.ಮುರುಘಾಶರಣರು ಇನ್ನು ನೂರು ಕಾಲ ಬಾಳಲಿ ಎಂದು ಆಶಿಸಿದರು.
ರಾಜ್ಯ ಕುರುಬರ ಸಂಘದ ಕಾರ್ಯದರ್ಶಿ ಪಿ.ರಾಜ್‌ಕುಮಾರ್ ಕುರುಬ ಸಮಾಜದ ಮುಖಂಡರಾದ ರೇವಣಸಿದ್ದಪ್ಪ, ಕೆ.ಆರ್.ಗಂಗರಾಜ್, ಉಪ್ಪಾರ ಯುವ ಘಟಕ ಜಿಲ್ಲಾಧ್ಯಕ್ಷ ಎನ್.ಬಿ.ಲೋಕೇಶ್, ಜಂಗಮ ಯುವ ವೇದಿಕೆಯ ಸುದೀಂದ್ರ, ಯಾದವ ಸಮಾಜದ ಯುವ ನಾಯಕ ಎಸ್.ಮೋಹನ್ ಯಾದವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.