ಚಿತ್ರದುರ್ಗ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಶ್ರಯದಲ್ಲಿ ನಡೆಯುತ್ತಿರುವ ಹೊಳಲ್ಕೆರೆ ರಸ್ತೆಯ ಎಸ್.ಜೆ.ಎಂ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಸತಿ ನಿಲಯದಲ್ಲಿ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಗೊಳಗಾಗಿರುವ ರೋಗಿಗಳ ಚಿಕಿತ್ಸೆಗಾಗಿ ಫೀವರ್ ಕ್ಲಿನಿಕ್‌ನ್ನು ಪ್ರಾರಂಭಿಸಲಾಗಿದೆ.

ಹಾಗೆಯೇ ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಹ ವಿಶ್ವ ಆರೋಗ್ಯ ಸಂಸ್ಥೆ ಹಾಗು ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಿಯಮಗಳ ಪ್ರಕಾರ ಕೊರೊನಾ ವೈರಸ್ ಪೀಡಿತರಿಗೆ ಹಾಗು ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇರುವವರಿಗೆ ಪ್ರತ್ಯೇಕ ಫೀವರ್ ಕ್ಲಿನಿಕ್ ಹಾಗು ಒಳರೋಗಿಗಳಿಗೆ ಐಸೋಲೇಷನ್ ವಾರ್ಡ್‌ನ್ನು ಸಹ ಆರಂಭಿಸಲಾಗಿದ್ದು, ಚಿಕಿತ್ಸಾ ಕಾರ್ಯಗಳನ್ನು ತಜ್ಞ ವೈದ್ಯರ ತಂಡ ನಿಭಾಯಿಸುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.