ಬೆಳಗಾಂ; ಕಬ್ಬು ಬೆಳೆಗಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡಸುತ್ತಿರುವ ಸಂದರ್ಭದಲ್ಲಿ ರೈತ ಮಹಿಳೆ ಬಗ್ಗೆ ರಾಜ್ಯದ ಸಿಎಂ ಕೇವಲವಾಗಿ ಮಾತನಾಡಿದ್ದು, ಅವರಿಗೆ ಹೆಣ್ಣಿನ ಬಗ್ಗೆ ಗೌರವವಿಲ್ಲ. ಅವರು ಬಹಿರಂಗ ಕ್ಷಮೆಯಾಚಿಸಲಿ ಎಂದು ಕಬ್ಬು ಬೆಳೆಗಾರರ ಪರ ಹೋರಾಟಗಾರ್ತಿ ಜಯಶ್ರೀ ಇಂದು ಆಗ್ರಹಿಸಿದ್ದಾರೆ. 

 ಬೆಂಗಳೂರಿನ ಕೃಷಿ ಮೇಳದಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಮಾತನಾಡಿ, ಕಳೆದ 4 ವರ್ಷದಿಂದ ಎಲ್ಲಿ ಮಲಗಿದ್ದೆ? ಈಗ ಹಸಿರು ಶಾಲು ಹಾಕಿಕೊಂಡು ಪ್ರತಿಭಟಿಸುತ್ತಿದ್ದೀಯಾ? ಮತದಾನ ಮಾಡುವಾಗ ನಾನು ನೆನಪಿಗೆ ಬರಲಿಲ್ವಾ ಎಂದು ಹೇಳಿದಕ್ಕೆ ಮಹಿಳೆ ಬಗ್ಗೆ ಕೇವಲ ಮಾತನಾಡಿದಕ್ಕೆ  ಕ್ಷಮಾಪಣೆ ಕೇಳಲಿ ಎಂದು ಮಹಿಳಾ ಸಂಘಟನೆಗಳು ಆಗ್ರಹಿಸಿವೆ.