ಚಿತ್ರದುರ್ಗ: ಜಾತ್ರೆ ಅಂದ್ರೆ ಸಾಕು ಕಾರು ಬಸ್, ಟೆಂಪೋ, ಬೈಕ್ ನಲ್ಲಿ ಜನರು ಹೋಗುವದನ್ನು ನೋಡಿದ್ದೀರ ಆದ್ರೆ ಇಲ್ಲೊಂದು ಜಾತ್ರೆಗೆ ಎತ್ತಿನ ಗಾಡಿಗಳದೇ ಕಾರು ಬಾರು. ಹಾಗಾದ್ರೆ ಈ ಮಿಂಚೇರಿ ಜಾತ್ರೆಯ ಬಗ್ಗೆ ಒಮ್ಮೆ ಓದಿ ಬಿಡಿ.!

ಬಯಲು ಸೀಮೆಯಲ್ಲಿ ಬಡಕಟ್ಟು ಜನಾಂಗದ ಮಿಂಚೇರಿ ಜಾತ್ರೆಗೆ ಸಾಲು ಸಾಲು ಎತ್ತಿನ ಬಂಡಿ ಹೊಂಟವು. ಇಂದು ಚಾಲನೆಗೊಂಡಿದ್ದು ಆರು ದಿನಗಳ ತನಕ ಉತ್ಸವ ನಡೆಯಲಿದೆ.

ಮಿಂಚೇರಿ ಯಾತ್ರೆ ಬಚ್ಚಬೋರನಹಟ್ಟಿ ಮಾರ್ಗವಾಗಿ ಗೋನೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಚಿತ್ರದುರ್ಗ, ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೇಗುದ್ದು, ಮೇಗಳಹಟ್ಟಿ, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ಮದಕರಿಪುರ ಹಾಗೂ ಮಿಂಚೇರಿ ಪುರದವರೆಗೆ ನಡೆಯಲಿದೆ.

ಸುಮಾರು ಕಿಲೋ ಮೀಟರ್ ಮಾರ್ಗದುದ್ದಕ್ಕೂ ಎತ್ತ ಕಣ್ಣಾಯಿಸಿದರೂ ಶೃಂಗಾರಗೊಂಡ ಎತ್ತಿನ ಗಾಡಿಗಳ ಸದ್ದು ಕಣ್ಣಿಗೆ ರಾಚುತ್ತವೆ. ಈ ಸಂಭ್ರಮದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನ ಕಾತುರದಿಂದ ಕಾಯುತ್ತಾರೆ.!

ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಮ್ಯಾಸ ನಾಯಕ ಸಮುದಾಯದವರು ತಮ್ಮ ಆರಾಧ್ಯ ದೈವ ಹಾಗೂ ಸಾಂಸ್ಕೃತಿಕ ವೀರ ಎಂದೇ ಖ್ಯಾತಿ ಗಳಿಸಿರುವ ಗಾದ್ರಿಮಲೆ ಹೆಬ್ಬುಲಿ ಗಾದ್ರಿ ಪಾಲನಾಯಕ ಸ್ವಾಮಿಯ ಹೆಸರಿನಲ್ಲಿ ನಡೆಸುವ ಆರು ದಿನಗಳ ಮಿಂಚೇರಿ ಯಾತ್ರೆಯ ಜಾತ್ರೆಯಲ್ಲಿ ನಾವು ಈ ವಿಶಿಷ್ಟ ಆಚರಣೆ.

 ಗ್ರಾಮದಿಂದ 40 – 50 ಕಿ.ಮೀ ದೂರದಲ್ಲಿರುವ ಸಿರಿಗೆರೆ ಗ್ರಾಮ ಹತ್ತಿರದ ಗಾದ್ರಿ ಪಾಲನಾಯಕನ ಸ್ಥಳಕ್ಕೆ ಹೋಗಿ ಎಡೆ ಅರ್ಪಿಸಿ, ಪೂಜೆ ಸಲ್ಲಿಸಿ ಬರುವುದು ಈ ಯಾತ್ರೆಯ ವಿಶೇಷ.

‘ಬರುವಂಥ ಭಕ್ತರು ಒಂದು ದಿನದಲ್ಲೇ ಹಿಂತಿರುಗುವುದಿಲ್ಲ. ಎರಡು ದಿನಗಳ ಕಾಲ ಮಿಂಚೇರಿ ಗುಡ್ಡದಲ್ಲಿಯೇ ಬಿಡಾರ ಹೂಡುತ್ತಾರೆ. ಯಾತ್ರೆಗೆ ಸಾವಿರಾರು ಜನರು ತಮ್ಮ ಸಂಬಂಧಿಕರ ಜತೆಗೂಡಿ ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯದಂತೆ ಎತ್ತಿನ ಗಾಡಿ ಜತೆಗೆ ಇತ್ತೀಚೆಗೆ ಟ್ರ್ಯಾಕ್ಟರ್ ಮೂಲಕವೂ ಬರುತ್ತಾರೆ’ ಎನ್ನುತ್ತಾರೆ ಅವರು.

‘ಡಿ. 22 ರಂದು ಬೆಳಿಗ್ಗೆ 10 ಕ್ಕೆ ಜಾತ್ರೆಗೆ ಚಾಲನೆಗೊಂಡು 24 ರಂದು ಬೆಳಿಗ್ಗೆ 6ಕ್ಕೆ ಗಾದ್ರಿ ಪಾಲನಾಯಕ ಮತ್ತು ಹುಲಿರಾಯನ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತದೆ. 25 ರಂದು ವಿವಿಧ ಪೂಜೆ, ದಾಸೋಹ ನೆರವೇರಿದ ನಂತರ ಮಿಂಚೇರಿಯಿಂದ ಹಿಂತಿರುಗಿ ಕಡ್ಲೇಗುದ್ದು ಬಳಿ ಅಂದು ರಾತ್ರಿ ತಂಗುವುದು. 26 ರಂದು ಜನಗಿ ಹಳ್ಳಿ ಗಂಗಮ್ಮನ ಪೂಜೆ ನಡೆಯುತ್ತದೆ.

27 ರಂದು ವಿಶೇಷ ಪೂಜೆ ಸಲ್ಲಿಸಿ, ಮಧ್ಯಾಹ್ನ 3 ಕ್ಕೆ ಗ್ರಾಮ ಪ್ರವೇಶವಾಗಲಿದೆ. ನಂತರ ಗ್ರಾಮದ ದೇವರ ಬಂಡೆ, ಬಸವನ ಬಾವಿ ಹತ್ತಿರ ಪೂಜೆ ಸಲ್ಲಿಸಿ ಗಾದ್ರಿ ಪಾಲನಾಯಕನ ದೇಗುಲ ತಲುಪಲಿದೆ.

ಹೇಗಿದೆ ಅಲ್ವ ಈ ಜಾತ್ರೆಯ ವಿಶೇಷ..!