ಚಿತ್ರದುರ್ಗ: ನಗರಕ್ಕೆ ಸಮೀಪವಿರುವ ಮಾರಪ್ಪನಹಟ್ಟಿ ರಸ್ತೆಯ ತೀಕ್ಷ್ಣ ಅಂಧರ ಶಾಲೆ ಬೋರಪ್ಪ ಬಡಾವಣೆ, ದವಳಗಿರಿ ೨ನೇ ಹಂತ ಮತ್ತು ೩ನೇ ಹಂತ, ಆಶ್ರಯ ಬಡಾವಣೆ ಈ ಭಾಗಗಳಲ್ಲಿ ಪ್ರತಿನಿತ್ಯ ಸಂಜೆ ೫.೦೦ ರಿಂದ ೧೧.೦೦ಗಂಟೆಯ ಸಮೀಪದಲ್ಲಿ ಮತ್ತು ಬೆಳಗಿನ ಜಾವದ ಸಮಯದಲ್ಲಿ ಮೂರು ಚಿರತೆಗಳು ಪ್ರತಿನಿತ್ಯ ನಿರ್ಭಯವಾಗಿ ಸಂಚರಿಸುತ್ತಿವೆ ಹಾಗಾಗಿ ಚಿರತೆಗಳನ್ನು ಬಂಧಿಸಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾಂಗ್ರೆಸ್ ಮುಖಂಡ ಬಿ.ಟಿ.ಜಗದೀಶ್ ಮನವಿ ಮಾಡಿದ್ದಾರೆ.
ಚಿರತೆಗಳು ನಾಯಿ, ಧನಕರುಗಳು ಹಿಡಿದು ತಿನ್ನುವಂತಹ ಕೆಲಸಗಳಲ್ಲಿ ನಿರತವಾಗಿವೆ. ಇನ್ನು ಕೆಲವೇ ದಿನಗಳಲ್ಲಿ ನಾಯಿಗಳ ಸಂಖ್ಯೆ ಕಡಿಮೆಯಾದ ನಂತರ ಮನುಷ್ಯರ ಮೇಲೆ ದಾಳಿ ನಡೆಸುವ ಸಂಭವವಿದ್ದು, ಜನರು ಭಯ ಭೀತರಾಗಿದ್ದಾರೆ.

ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಸಂಚರಿಸುವಾಗ ಮೇಲಿಂದ ಎಗರಿ ರಸ್ತೆಗಳನ್ನು ದಾಟುತ್ತಿವೆ. ಯಾವುದೇ ಸಂದರ್ಭದಲ್ಲಾದರೂ ಆಕ್ರಮಣ ಮಾಡುವಂತೆ ಜನರನ್ನು ದಿಟ್ಟಿಸಿ ನೋಡುತ್ತವೆ. ಮಾಳಪ್ಪನಹಟ್ಟಿ ರಸ್ತೆಯಲ್ಲಿ ಸಂಜೆ ೫.೦೦ ರಿಂದ ೭.೦೦ಗಂಟೆಯ ವೇಳೆಯ ಮಧ್ಯದಲ್ಲಿ ಚಿಕ್ಕ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಗಾರ್ಮೆಂಟ್ಸ್‌ನಲ್ಲಿ ಕೆಲಸ ನಿರ್ವಹಿಸುವ ಹೆಣ್ಣುಮಕ್ಕಳು ನಡೆದುಕೊಂಡು ತಮ್ಮ ಗ್ರಾಮಗಳಿಗೆ ತಲುಪಲು ಹಾಗೂ ರಾಷ್ಟ್ರೀಯ ಹೆದ್ದಾರಿ-೧೩ ಮಾಳಪ್ಪನಹಟ್ಟಿಯ ಬಸ್ಸುಗಳನ್ನು ಅಂತಲು ಹೆಚ್ಚಾಗಿ ಬರುತ್ತಾರೆ. ಈ ಸಂದರ್ಭದಲ್ಲೇನಾದರೂ ಚಿರತೆಗಳು ದಾಳಿ ನಡೆಸಿದ್ದೆ ಆದರೆ ಹೆಚ್ಚಿನ ಅಪಾಯ ಸಂಭವಿಸಲಿದೆ.
ಹಾಗಾಗಿ ಈ ಕೂಡಲೆ ಈ ಚಿರತೆಗಳಿಂದ ಮುಕ್ತಮಾಡಿ ಎಂದು ಹೇಳಿದ್ದಾರೆ.